ನ್ಯೂಸ್ ನಾಟೌಟ್: ಇನ್ನು ಮುಂದೆ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರಗಳು ಹೆಚ್ಚಳವಾಗಲಿವೆ. ರಿಸರ್ವ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಘೋಷಣೆಯಿಂದ ಸಹಜವಾಗಿಯೇ ಮನೆ, ವಾಹನ ಖರೀದಿಗೆ ಪ್ಲಾನ್ ಮಾಡಿದ್ದ ಹಲವಾರು ಜನರಿಗೆ ಇದು ನಿರಾಶೆಯ ಸಂಗತಿಯಾಗಿದೆ.
ಕಳೆದ ಮೇ ತಿಂಗಳಿನಿಂದಲೂ ರೆಪೋದರವನ್ನು ಹೆಚ್ಚಿಸುತ್ತ ಬರಲಾಗುತ್ತಿದೆ. ಇದಕ್ಕೆ ಕಾರಣ ದೇಶದಲ್ಲಿ ಹಣದುಬ್ಬರವನ್ನು ಶೇ.೪ರೊಳಗೆ ನಿಯಂತ್ರಿಸುವುದು ಆರ್ಬಿಐ ಗುರಿಯಾಗಿದೆ. ಈ ರೆಪೋ ದರ ಏರಿಕೆಯೂ ಈ ವರ್ಷದಲ್ಲಿ ೫ನೇ ಸಲದ್ದಾಗಿದೆ. ಶೇ.೬.೨೫ರಷ್ಟು ರೆಪೋ ದರವನ್ನು ಹೆಚ್ಚಳ ಮಾಡಲಾಗಿದೆ. ದೇಶದಲ್ಲಿ ಏರುತ್ತಿರುವ ಹಣದುಬ್ಬರ ಇಂತಹ ನಿರ್ಧಾರದಿಂದಲಾದರೂ ನಿಯಂತ್ರಣಕ್ಕೆ ಬರುತ್ತದಾ ಅನ್ನುವುದನ್ನು ಕಾದು ನೋಡಬೇಕಿದೆ.