ನ್ಯೂಸ್ ನಾಟೌಟ್ : ನೀವು ನಿಮ್ಮ ಉಗುರುಗಳ ಅಂದವನ್ನು ಕಾಣಲು ಮತ್ತು ಗಮನ ಸೆಳೆಯಲು ನೈಲ್ ಪಾಲಿಶ್ ನ್ನು ಬಳಸುತ್ತಿದ್ದೀರಾ ? ನೀವು ಬಳಸುವ ನೈಲ್ ಪಾಲಿಶ್ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಅಪಾಯವನ್ನು ಉಂಟುಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹಾಗಾದರೆ ಎಚ್ಚರಿಕೆ !
ಹೆಣ್ಣು ಮಕ್ಕಳು ತಮ್ಮ ಕೈ -ಕಾಲುಗಳ ಸೌಂದರ್ಯ ವೃದ್ದಿಸಲು ಮತ್ತು ಬಟ್ಟೆಗೆ ಹೊಂದಾಣಿಕೆ ಆಗುವಂತಹ ವಿವಿಧ ಬಣ್ಣಗಳ ನೈಲ್ ಪಾಲಿಶ್ ಹಾಕುವುದು ಇಂದಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಮನೆಯಿಂದ ಯಾವ ಕಡೆ ಹೊರಟರೂ ಬಣ್ಣ ಹಚ್ಚುವುದನ್ನು ಮಾತ್ರ ಬಿಡುವುದಿಲ್ಲ. ನೈಲ್ ಪಾಲಿಶ್ ನಲ್ಲಿ ಎಷ್ಟು ವಿಷ ಆಮ್ಲ ಬಳಸುತ್ತಿದ್ದಾರೆ ಎಂದು ತಿಳಿಯುವುದಿಲ್ಲ. ಆದರೆ ನೈಲ್ ಪಾಲಿಶ್ ಆರೋಗ್ಯಕ್ಕೆ ಮಾರಕ ಎಂದು ಸಂಶೋಧನೆಗಳು ಸಾಬೀತುಪಡಿಸಿದೆ.ಈ ನೈಲ್ ಪಾಲಿಶ್ ನಲ್ಲಿರುವ ಹಾನಿಕಾರಕಗಳು ನಮಗೆ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಅಲ್ಲದೇ, ನೈಲ್ ಪಾಲಿಶ್ ವಾಸನೆಯು ಶ್ವಾಸಕೋಶದ ಆರೋಗ್ಯಕ್ಕೂ ಮಾರಕವಾಗಿದೆ ಎಂದು ತಿಳಿದು ಬಂದಿದೆ.
ಪದೇ ಪದೇ ನೈಲ್ ಪಾಲಿಶ್ ಬಳಸಿಕೊಂಡರೆ ಅದರಿಂದ ಉಗುರುಗಳು ಒಣಗುವುದು ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತದೆ, ಹಾಗೂ ಇದರಲ್ಲಿ ಕೆಲವೊಂದು ಕಾಸ್ಮಟಿಕ್ ರಾಸಾಯನಿಕ ಆಮ್ಲಗಳಾದ ಫಾರ್ಮಾಲ್ಡಿಹೈಡ್, ಡಿಬುಟೈಲ್ ಫಾಥಲೇಟ್, ಮಿಶ್ರಿತವಾದರಿಂದ ಆರೋಗ್ಯಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ. ಆಮ್ಲದ ಹನಿಯ ವಾಸನೆಯಿಂದ ಉಸಿರಾಟದ ತೊಂದರೆ ,ಕ್ಯಾನ್ಸರ್ , ಗರ್ಭಕೋಶಗಳ ಮಾರಕ ಕಾಯಿಲೆಗಳನ್ನು ಉಂಟುಮಾಡುತ್ತದೆ.