ನ್ಯೂಸ್ ನಾಟೌಟ್ : ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ. ನವ ಮಂಗಳೂರಿನ ಬಂದರಿನಲ್ಲಿ ಇದೀಗ ಖಾಲಿ ಇರುವ 2 ಸಹಾಯಕ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಡಿ. 30 ರೊಳಗೆ ಅರ್ಜಿ ಸಲ್ಲಿಸಬೇಕು.
ನವ ಮಂಗಳೂರಿನ ಪೋರ್ಟ್ ಟ್ರಸ್ಟ್ ಅಧಿಕಾರಿಗಳು ಇತ್ತೀಚೆಗೆ ಆಫ್ ಲೈನ್ ಮೂಲಕ 2 ಫೊಸ್ಟ್ ಗಳು ಭರ್ತಿ ಮಾಡಲು ಉದ್ಯೋಗ ಅಧಿಸೂಚನೆ ಪ್ರಕಟಿಸಿದ್ದಾರೆ. ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ , ಅನುಭವ ಮತ್ತು ಇತ್ಯಾದಿಗಳನ್ನು ಪರಿಶೀಲಿಸಬೇಕು. ಹಾಗೂ ಅರ್ಜಿಯನ್ನು ಡಿ.22, 2022ರ ಮೊದಲು ಸಲ್ಲಿಸಬೇಕು.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು , ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಪದವಿ ಪಡೆದಿರಬೇಕು.
-2 ಸಹಾಯಕ ಕಾರ್ಯದರ್ಶಿ ಖಾಲಿ ಇರುವ ಹುದ್ದೆ.
-3 ರಿಂದ 10 ವರ್ಷಗಳ ಅನುಭವ ಹೊಂದಿರಬೇಕು.
-ಲಿಖಿತ ಪರೀಕ್ಷೆ , ವೈಯುಕ್ತಿಕ ಸಂದರ್ಶನ, ವೈದ್ಯಕೀಯ ಪರೀಕ್ಷೆ, ವಾಕಿನ್ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
-ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
-ಮಾಸಿಕ ವೇತನ 40000 ರಿಂದ 140000 ದೊರೆಯಲಿದೆ.
-ಎಲ್ಲಾ ದಾಖಲಾತಿಗಳೊಂದಿಗೆ ನವ ಮಂಗಳೂರು ಬಂದರು, ಪ್ರಾಧಿಕಾರ ಪಣಂಬೂರು ಮಂಗಳೂರು -575010 ಈ ವಿಳಾಸಕ್ಕೆ ಕಳುಹಿಸಬೇಕು.