ನ್ಯೂಸ್ ನಾಟೌಟ್ : ಇತ್ತೀಚೆಗೆ ಸಿನಿಮಾ ಶೂಟಿಂಗ್ ವೇಳೆ ದುರಂತ ಸಂಭವಿಸಿ ಸಾವಿಗೀಡಾದ ಹಲವು ಪ್ರಕರಣಗಳು ನಡೆದಿವೆ. ಇದೀಗ ಅಂತಹುದೇ ಮತ್ತೊಂದು ದುರ್ಘಟನೆ ಚೆನ್ನೈನಲ್ಲಿ ನಡೆದ ತಮಿಳು ಸಿನಿಮಾವೊಂದರ ಚಿತ್ರೀಕರಣದ ವೇಳೆ ನಡೆದಿದೆ.
ತಮಿಳು ನಟ ವಿಜಯ್ ಸೇತುಪತಿ ಚಿತ್ರೀಕರಣದ ವೇಳೆ ಸ್ಟಂಟ್ ಕಲಾವಿದ ಎಸ್ ಸುರೇಶ್ (೫೪) ಸಾವಿಗೀಡಾಗಿದ್ದಾರೆ. ಖ್ಯಾತ ನಿರ್ದೇಶಕ ವೆಟ್ರಿಮಾರನ್ ” ಮಿಡುತಲೈ” ಸಾಹಸ ಸಿನಿಮಾದ ರೈಲು ದುರಂತದ ಚಿತ್ರೀಕರಣವನ್ನು ಮಾಡಲಾಗುತ್ತಿತ್ತು. ಈ ವೇಳೆ ಸುರೇಶ್ ಹಾಗೂ ಇತರ ಸ್ಟಂಟ್ ಮ್ಯಾನ್ಗಳನ್ನು ರೋಪ್ ನಲ್ಲಿ ಕ್ರೇನ್ ಗೆ ಕಟ್ಟಲಾಗಿತ್ತು. ಅನಿರೀಕ್ಷಿತವಾಗಿ ಕ್ರೇನ್ ನಿಂದ ರೋಪ್ ತುಂಡಾಗಿ ಸುರೇಶ್ ಸುಮಾರು ೨೦ ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾರೆ . ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರೂ ಬದುಕುಳಿಯಲಿಲ್ಲ. ಮತ್ತು ಇನ್ನೋರ್ವ ಸಾಹಸ ಕಲಾವಿದ ಕೂಡ ಗಂಭೀರ ಗಾಯಗೊಂಡಿದ್ದಾರೆ ಎಂದು ಚೆನೈ ಪೊಲೀಸರು ತಿಳಿಸಿದ್ದಾರೆ.