ನ್ಯೂಸ್ ನಾಟೌಟ್ : ಐತಿಹಾಸಿಕ ಇಕ್ಕೇರಿ ನಾಯಕ ಕಾಲಘಟ್ಟದಲ್ಲಿ ನಿರ್ಮಣಗೊಂಡಿದ್ದ ಕಾರ್ಕಳ ಕೋಟೆಕಣಿ ಕೋಟೆಯಲ್ಲಿ ೩೦೦ ಕ್ಕೂ ಅಧಿಕ ಹೆಚ್ಚು ಫಿರಂಗಿ ಗುಂಡುಗಳು ಪತ್ತೆಯಾಗಿದೆ.
ಇತ್ತೀಚಿಗೆ ಕಾರ್ಕಳ ಕೋಟೆಯನ್ನು ಕೆಲವು ಉದ್ಯಮಿಗಳು ಖರೀಸಿದ್ದಾರೆ. ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆಂದು ಹಿಟಾಚಿಯಲ್ಲಿ ಮಣ್ಣು ಅಗೆಯುತ್ತಿದ್ದಾಗ ಸುಮಾರು ೧೫ ಅಡಿ ಆಳದಲ್ಲಿ ವೃತ್ತಾಕಾರದ ೩೦೦ ಕ್ಕೂ ಹೆಚ್ಚು ಗುಂಡು ಕಲ್ಲುಗಳು ಪತ್ತೆಯಾಗಿದೆ.
ಸ್ಥಳಕ್ಕೆ ಕಾರ್ಕಳ ಪ್ರಭಾರ ತಹಶೀಲ್ದಾರ್ ಪುರಂದರ ಹೆಗ್ಗಡೆ ಹಾಗೂ ಪುರಾತತ್ವ ಅಧಿಕಾರಿಗಳು ಭೇಟಿ ಪರರಶೀಲನೆ ನಡೆಸಿದ್ದಾರೆ. ಸಿಕ್ಕಿರುವ ಕಲ್ಲು ಗುಂಡುಗಳು ಸುಮಾರು ೧ ಕೆ .ಜಿ. ಭಾರ ಹೊಂದಿದ್ದು ,ಪುರಾತತ್ವದ ಕಾಲದ ಇಲಾಖೆಗೆ ಒಪ್ಪಿಸಿದ್ದಾರೆ. ಇತಿಹಾಸಕಾರರ ಪ್ರಕಾರ ಇಕ್ಕೇರಿ ,ಕೆಳದಿ ಶಿವಪ್ಪ ನಾಯಕನ ಆಳ್ವಿಕೆಯಲ್ಲಿ ಈ ಕೋಟೆ ನಿರ್ಮಿಸಲಾಗಿತ್ತು. ಬಳಿಕ ಟಿಪ್ಪು ಸೈನ್ಯವು ಶಿವಪ್ಪ ನಾಯಕನ ಕೋಟೆಗೆ ದಾಳಿ ನಡೆಸಿತ್ತು. ಈ ವೇಳೆ ವೈರಿಗಳಿಂದ ರಕ್ಷಿಸಿಕೊಳ್ಳಲು ಕೋಟೆಯ ಸುತ್ತಲೂ ಕಂದಕ ನಿರ್ಮಿಸಿದ್ದರಿಂದ ಈ ಸ್ಥಳಕ್ಕೆ ಕೋಟೆಕಣಿ ಎಂದು ಹೆಸರು ಬಂದಿದೆ. ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.