ನ್ಯೂಸ್ ನಾಟೌಟ್: ಭಾರತದ ರೈಲ್ವೆ ಇಲಾಖೆ ಮುಂದಿನ ವರ್ಷ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
೨೦೨೩ಕ್ಕೆ ಭಾರತದ ಮೊದಲ ರಾಮೇಶ್ವರಂ ಸಮುದ್ರದ ವರ್ಟಿಕಲ್ ಲಿಫ್ಟ್ ರೈಲ್ವೆ ಸೇತುವೆ ನಿರ್ಮಾಣ ಆಗಲಿದೆ. ಈ ಬಗ್ಗೆ ಸ್ವತಃ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಈ ಸೇತುವೆ ರಾಮೇಶ್ವರದಿಂದ ತಮಿಳುನಾಡು ಸಂಪರ್ಕ ಕಲ್ಪಿಸಲಿದೆ. ಇಂತಹ ವರ್ಟಿಕಲ್ ಸೇತುವೆ ಇದೇ ಮೊದಲ ಬಾರಿಗೆ ದೇಶದಲ್ಲಿ ನಿರ್ಮಿಸಲಾಗಿದೆ. ಒಟ್ಟಾರೆ 535 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ರೈಲುಗಳು ಈ ಸೇತುವೆಯಲ್ಲಿ ಅತ್ಯಂತ ವೇಗವಾಗಿ ಸಾಗಬಹುದಾಗಿದೆ. ತಮಿಳುನಾಡಿನ ಪಂಬನ್ ಎಂಬಲ್ಲಿ ಈ ಸುಂದರವಾದ ಬ್ರಿಡ್ಜ್ ನಿರ್ಮಾಣವಾಗುತ್ತಿದೆ. ಈಗಾಗಲೇ ಕೆಲಸಗಳು ಶೇ.೮೪ ರಷ್ಟು ಮುಗಿದು ಹೋಗಿದೆ. ಇನ್ನೂ ಕೇವಲ ಶೇ.೧೬ರಷ್ಟು ಕೆಲಸ ಬಾಕಿ ಇದೆ. ಆದಷ್ಟು ಬೇಗ ಈ ಕೆಲಸ ಮುಗಿದು ಮುಂದಿನ ವರ್ಷ ಜನಸೇವೆಗೆ ಲಭ್ಯವಾಗಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.