ನ್ಯೂಸ್ ನಾಟೌಟ್: ಆಂಬ್ಯುಲೆನ್ಸ್ ಸೇವಾ ಯೋಜನೆಗಾಗಿ ಗುತ್ತಿಗಾರಿನಲ್ಲಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಅನ್ನು ರಚನೆ ಮಾಡಿದ್ದರು. ಇದೀಗ ಸಕ್ರಿಯವಾಗಿ ಆಂಬ್ಯುಲೆನ್ಸ್ ಸೇವೆ, ರಕ್ತದಾನ ಶಿಬಿರ, ಯೋಗ ತರಬೇತಿ ಕೇಂದ್ರ ಸೇರಿದಂತೆ ಹಲವಾರು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದೆ.
ಸರಕಾರದ ಕಾನೂನಿನ ಅಡಿಯಲ್ಲಿ 12A/80G ಮಾನ್ಯತೆ ಪಡೆದಿದೆ. ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್. ರಿ. ಗುತ್ತಿಗಾರು ಪ್ರಥಮ ದೇಣಿಗೆಯ ಸದಸ್ಯರಾಗಿ ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆದ ರಶ್ಮಿ ಅಶೋಕ್ ನೆಕ್ರಾಜೆ ಅವರು ದೇಣಿಗೆಯನ್ನು ನೀಡಿ ಟ್ರಸ್ಟ್ ಮೂಲಕ ನಡೆಯುತ್ತಿರುವ ಸೇವಾ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯ ತಿಳಿಸಿದರು. ಸುಳ್ಯ ತಾಲೂಕು ರೆಡ್ ಕ್ರಾಸ್ ಸಭಾಪತಿ ಪಿ. ಬಿ. ಸುಧಾಕರ್ ರೈ ಪೆರಾಜೆ, ಪ್ರದೀಪ್ ಕುಮಾರ್ ಕೆ. ಯಲ್. ನ್ಯಾಯವಾದಿಗಳು ಸುಳ್ಯ.ಟ್ರಸ್ಟ್ ನ ಲೆಕ್ಕಪರಿಶೋದಕರಾದ ಬಾಲಕೃಷ್ಣ ಗೌಡ ನಡುಗಲ್ಲು, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯ ಮೋಹನ್ ದಾಸ್ ಶಿರಾಜೆ ಉಪಸ್ಥಿತರಿದ್ದರು.