ನ್ಯೂಸ್ ನಾಟೌಟ್: ದೇಶ ಸೇವೆಯ ಕನಸು ಕಂಡಿದ್ದ ಕಾಲೇಜು ಯುವತಿಯೊಬ್ಬಳು ಇದೀಗ ಬಿಎಸ್ಎಫ್ (ಗಡಿ ಭದ್ರತಾ ಪಡೆ)ಗೆ ಕಾನ್ ಸ್ಟೇಬಲ್ ಆಗಿ ಆಯ್ಕೆಯಾಗಿದ್ದಾರೆ.
ಚೈತ್ರ( 21 ವರ್ಷ) ಆಯ್ಕೆಯಾದವರಾಗಿದ್ದಾರೆ. ಸದ್ಯ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪೂರ್ಣಗೊಳಿಸಿ ಪ್ರಥಮ ವರ್ಷದ ಎಂಎಸ್ಸಿ ಓದುತ್ತಿದ್ದಾರೆ. 021 ರ ನವೆಂಬರ್ ನಲ್ಲಿ ನಡೆದ ಸ್ಟಾಫ್ ಸೆಲೆಕ್ಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಚೈತ್ರ 2022ರ ಡಿಸೆಂಬರ್ 21 ರಂದು ಬೆಂಗಳೂರಿನ ಬಿಎಸ್ಎಫ್ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಸ್ಎಫ್ ಆದೇಶಿಸಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಇವರು ಪುತ್ತೂರಿನ ಕರ್ಕುಂಜ ಮನೆಯ ಲಿಂಗಪ್ಪ ಗೌಡರ ಪುತ್ರಿಯಾಗಿದ್ದಾರೆ. ಚೈತ್ರ ರವರು ಪುತ್ತೂರಿನ ರಾಗಿಕುಮೇರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರು. ಪ್ರೌಡಶಾಲೆಯನ್ನು ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಪೂರೈಸಿದ್ದರು. ಈ ಹಿಂದೆಯೂ ಪುತ್ತೂರಿನ ಇಬ್ಬರು ಹುಡುಗಿಯರು ದೇಶ ಸೇವೆಗೆ ಸೈನ್ಯ ಸೇರಿದ್ದರು. ಇದೀಗ ಈ ಸಾಲಿನಲ್ಲಿ ಚೈತ್ರ ಕೂಡ ಗುರುತಿಸಿಕೊಂಡಿರುವುದು ವಿಶೇಷವಾಗಿದೆ.