ನ್ಯೂಸ್ ನಾಟೌಟ್ : ಸಮಾಜದಲ್ಲಿ ಮಂಗಳಮುಖಿಯರನ್ನು ನೋಡುವ ರೀತಿಯೇ ಬೇರೆ. ಭಿಕ್ಷಾಟನೆ, ವೇಶ್ಯಾವಾಟಿಕೆ ಮಾಡುತ್ತಾ ಜೀವನ ಸಾಗಿಸಬೇಕು. ನೆಮ್ಮದಿಯ ಬದುಕೆನ್ನುವುದು ಇವರಿಗೆ ಗಗನ ಕುಸುಮವೇ ಸರಿ. ಇವರದ್ದು ಅತ್ಯಂತ ಕಠಿಣ ಜೀವನ.
ಸರಕಾರ ಅನೇಕ ಯೋಜನೆಗಳನ್ನು ಇವರಿಗಾಗಿ ಮಾಡುವ ಪ್ರಯತ್ನ ನಡೆಸುತ್ತಿದೆಯಾದರೂ ಇವರಿಗಾಗಿ ಇನ್ನೂ ಸಮರ್ಪಕ ಯೋಜನೆಯೊಂದು ಜಾರಿಗೆ ತರುವಲ್ಲಿ ವಿಫಲವಾಗಿದೆ. ಆದರೆ ಆ ನಿರಾಶೆಯ ನಡುವೆಯೂ ಇಬ್ಬರು ಮಂಗಳಮುಖಿಯರು ಸರಕಾರಿ ವೈದ್ಯರಾಗುವ ಮೂಲಕ ಅತ್ಯದ್ಭುತ ಸಾಧನೆ ಮಾಡಿ ಮೆರೆದಿದ್ದಾರೆ.
ಇದೀಗ ತೆಲಂಗಾಣದಲ್ಲಿ ಸರಕಾರಿ ವೈದ್ಯರಾಗಿ ಮಂಗಳಮುಖಿಯರಿಬ್ಬರು ನೇಮಕವಾಗಿದ್ದಾರೆ. ಎಂಬಿಬಿಎಸ್ ಪದವಿ ಮುಗಿಸಿರುವ ಪ್ರಾಚಿ ರಾತೋಡ್ ಹಾಗೂ ರುತ್ ಜಾನ್ ಪೌಲ್ ಅವರೇ ಈ ಸಾಧನೆ ಮಾಡಿದವರು. ಈ ಮೂಲಕ ಈ ಇಬ್ಬರು ಮಂಗಳಮುಖಿ ವೈದ್ಯರು ತೆಲಂಗಾಣದಲ್ಲಿ ಇತಿಹಾಸ ಬರೆದಂತಾಗಿದೆ. ಎಂಬಿಬಿಎಸ್ ಪದವಿ ಮುಗಿಸಿರುವ ಪ್ರಾಚಿ ರಾತೋಡ್ ಹಾಗೂ ರುತ್ ಜಾನ್ ಪೌಲ್ ಅವರೇ ಈ ಸಾಧನೆ ಮಾಡಿದವರು. ಈ ಮೂಲಕ ಈ ಇಬ್ಬರು ಮಂಗಳಮುಖಿ ವೈದ್ಯರು ತೆಲಂಗಾಣದಲ್ಲಿ ಇತಿಹಾಸ ಬರೆದಂತಾಗಿದೆ.