ವರದಿ: ಕೃತಿ ಗಣೇಶ್
ನ್ಯೂಸ್ ನಾಟೌಟ್: ಇರುವೆ ಇಲ್ಲದ ಮನೆ ಇಲ್ಲ. ಹೌದು ಸಾಮಾನ್ಯವಾಗಿ ಇರುವೆ ಅಡುಗೆ ಮನೆಯಲ್ಲಿ ಹೆಚ್ಚು ಕಾಣ ಸಿಗುತ್ತದೆ. ಮನೆಯಲ್ಲಿ ಏನೇ ಸಿಹಿ , ಎಣ್ಣೆ ತಿನುಸುಗಳನ್ನು ಮಾಡಿಟ್ಟರೆ ಸಾಕು ಅಲ್ಲಿ ಇರುವೆಗಳು ಪ್ರತ್ಯಕ್ಷವಾಗುತ್ತದೆ.
ಈ ಇರುವೆಗಳ ಕಾಟ ತಡೆಯಲಾಗದೆ ಮಹಿಳೆಯರು ಮಾರುಕಟ್ಟೆಯಿಂದ ಇರುವೆ ಓಡಿಸಲು ಬಗೆ ಬಗೆಯ ಕೀಟನಾಶಕಗಳನ್ನು ಪ್ರಯೋಗಿಸಿ ಅದು ಫಲ ನೀಡದೆ ಇದ್ದಾಗ ಹಿಡಿ ಶಾಪ ಹಾಕಿಕೊಳ್ಳುತ್ತಾರೆ. ಜತೆಗೆ ಹೀಗೆ ಕೀಟ ನಾಶಕ ಬಳಸುವುದು ಮಕ್ಕಳಿರುವ ಮನೆಯಲ್ಲಿ ಅಪಾಯ. ಹಾಗಾಗಿ ಎಚ್ಚರಿಕೆಯಿಂದ ಇರಬೇಕು. ಜತೆಗೆ ಇರುವೆಗಳನ್ನೂ ಮನೆಗೆ ಬಾರದಂತೆ ನೋಡಿಕೊಳ್ಳಬೇಕು ಇದು ತುಂಬಾ ಮಹತ್ವದ ವಿಚಾರವಾಗಿದೆ. ಹೀಗಾಗಿ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ನೀವು ಮನಸ್ಸು ಮಾಡಿದರೆ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಇರುವೆಗಳ ಜನ್ಮ ಜಾಲಾಡಬಹುದು.
ಮನೆಯ ಮೂಲೆ ಹಾಗೂ ಇರುವೆಗಳು ಬರುವ ಜಾಗದಲ್ಲಿ ಲವಂಗವನ್ನು ಇಡಿ. ಬೇವಿನ ಎಲೆ ಕೂಡ ಇರುವೆ ಓಡಿಸಲು ಒಳ್ಳೆಯ ಮದ್ದು. ಕಿಟಕಿ, ಬಾಗಿಲು, ಇರುವೆ ಬರುವ ಜಾಗಗಳಿಗೆ ಬೇವಿನ ಎಲೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ಹಾಕಿ. ಕಿಟಕಿ ಹಾಗೂ ಬಾಗಿಲಿನ ಬಳಿ ಕರ್ಪೂರವನ್ನಿಡಿ. ಇದ್ರಿಂದ ಇರುವೆಗಳು ಮನೆ ಪ್ರವೇಶ ಮಾಡುವುದಿಲ್ಲ. ವಾಸನೆಗೆ ಇರುವೆ ಓಡಿ ಹೋಗುತ್ತದೆ. ಹಾಗಾಗಿ ಬೆಳ್ಳುಳ್ಳಿ ರಸವನ್ನು ಇರುವೆ ಬರುವ ಸ್ಥಳಕ್ಕೆ ಸಿಂಪಡಿಸಿ. ಪ್ರತಿದಿನ ನೀರಿಗೆ ಉಪ್ಪು ಹಾಕಿ ಮನೆಯನ್ನು ಸ್ವಚ್ಛಗೊಳಿಸಿ. ಅರಿಶಿನ ನೀರನ್ನು ಇರುವೆ ಬರುವ ಜಾಗಕ್ಕೆ ಸಿಂಪಡಿಸಿದ್ರೆ ಇರುವೆ ಓಡಿ ಹೋಗುತ್ತದೆ. ಈ ರೀತಿ ಮಾಡುವುದರಿಂದ ಸುಲಭವಾಗಿ ಇರುವೆಯನ್ನು ಮನೆಯಿಂದ ಓಡಿಸಿ ನಮ್ಮದಿಯಿಂದ ಇರಬಹುದು.