ಸುಳ್ಯ: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಆರಂತೋಡು ಇದರ ಸ್ಥಾಪಕಾಧ್ಯಕ್ಷರು ಹಾಗು ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್ ರವರ 50 ನೇ ಹುಟ್ಟು ಹಬ್ಬದ ಪ್ರಯುಕ್ತ 1 ವರ್ಷದ ಕಾರ್ಯಕ್ರಮದ ಸಲುವಾಗಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ತು ಟಿ ಬಿ ಮುಹಮ್ಮದ್ ಕುಂಞಿ ಯವರ ಮಗಳು ಫಾತಿಮಾ ಎಂಬ ಬಡ ಕುಟುಂಬಕ್ಕೆ ರೂ. 6 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತಿದ್ದು ಇದರ ಕಾಮಗಾರಿ ವೀಕ್ಷಣೆಗೆ ಟಿ ಎಂ ಶಹೀದ್ ತೆಕ್ಕಿಲ್ ಮತ್ತು ಅವರ ಅಭಿಮಾನಿಗಳು ಭೇಟಿ ನೀಡಿ ಪರಿಶೀಲಿಸಿದರು. ಟಿ ಎಂ ಶಹೀದ್ ತೆಕ್ಕಿಲ್ ಸುವರ್ಣ ಸಂಭ್ರಮ ಅಭಿನಂದನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ಹಾಗೂ ಕೆ ಟಿ ವಿಶ್ವನಾಥ್ ರವರ ನೇತೃತ್ವದಲ್ಲಿ ಪರಿಸರ ಸ್ವಚ್ಚತೆ ಕಾರ್ಯಕ್ರಮ, ವಿವಿಧ ಧಾರ್ಮಿಕ ಕೇಂದ್ರಗಳಾದ ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ, ಸಂತ ಫ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಕಲ್ಲುಗುಂಡಿ ಮತ್ತು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿ, ಸುಳ್ಯದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗಿದೆ, ಕೊರೊನಾ ಲಾಕ್ ಡೌನ್ ಸಂದಭದಲ್ಲಿ ಹಲವಾರು ಮಂದಿಗೆ ಮದುವೆಗೆ, ಚಿಕಿತ್ಸೆಗೆ ಮತ್ತು ಆಹಾರ ಸಮಾಗ್ರಿಗಳನ್ನು ವಿತರಿಸಲಾಗಿದೆ. ಅನೇಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲಾಗಿದೆ. ನೀರ್ಮಾಣ ಹಂತದಲ್ಲಿರುವ ಮನೆಯ ಭೇಟಿ ಸಂದರ್ಭದಲ್ಲಿ ಆರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬ್ ಇಸಾಕ್ ಬಾಖವಿ, ಪೇರಡ್ಕ ಮುಹಿಯುದ್ದೀನ್ ಜುಮ ಮಸೀದಿ ಖತೀಬ್ ರಿಯಾಝ್ ಫೈಝಿ ಎಮ್ಮೆಮಾಡು, ನೂರುದ್ದೀನ್ ಅನ್ಸಾರಿ ಪೇರಡ್ಕ, ಸಾಜಿದ್ ಅಝ್ ಹರಿ ತೆಕ್ಕಿಲ್ ಪೇರಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ, ಆರಂತೋಡು ಮಸೀದಿ ಅಧ್ಯಕ್ಷ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಪೇರಡ್ಕ ಮಸೀದಿ ಕಾರ್ಯದರ್ಶಿ ರಜಾಕ್ ಹಾಜಿ ತೆಕ್ಕಿಲ್ ಮೊಟ್ಟೆಂಗಾರ್, ಅನ್ವಾರುಲ್ ಹುದಾ ಎಸೊಸಿಯೇಷನ್ ಅಧ್ಯಕ್ಷ ಎಸ್ ಎಂ ಅಬ್ದುಲ್ ಮಜೀದ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಬುಸಾಲಿ ಗೂನಡ್ಕ ಮತ್ತು ಎಸ್ ಕೆ ಹನೀಫ್ ಸಂಪಾಜೆ, ಕೆ ಎಂ ಮೂಸಾನ್ ಆರಂತೋಡು, ಹನೀಫ್ ಆರಂತೋಡು, ಮನ್ಸೂರ್ ಪಾರೆಕ್ಕಲ್, ಅನ್ವರ್ ಆರಂತೋಡು, ಲತೀಫ್ ತೆಕ್ಕಿಲ್ ಮೊಟ್ಟೆಂಗಾರ್, ಇಕ್ಬಾಲ್ ಚೆರೂರು, ಇಸಾಕ್ ಆರಂತೋಡು, ಪಸಿಲು ಆರಂತೋಡು, ಅಮೀರ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು.
- +91 73497 60202
- [email protected]
- November 23, 2024 12:42 AM