ನ್ಯೂಸ್ ನಾಟೌಟ್ : ಇತ್ತೀಚೆಗೆ ಭಾರತ-ಪಾಕ್ ಗಡಿಯಲ್ಲಿ ಶತ್ರು ದೇಶದ ಡ್ರೋನ್ ಗಳ ಹಾವಳಿಯೇ ಹೆಚ್ಚಾಗಿದೆ. ಪ್ರತಿನಿತ್ಯ ಡ್ರಗ್ಸ್ , ಶಸ್ತ್ರಾಸ್ತ್ರ , ಕಳ್ಳ ನೋಟು ಸಾಗಾಟದಂತಹ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಇದು ಗಡಿಯಲ್ಲಿ ರಕ್ಷಣಾ ಪಡೆಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಇಂತಹ ಸಾಕಷ್ಟು ಸವಾಲುಗಳನ್ನು ಎದುರಿಸುವುದಕ್ಕೆ ಇದೀಗ ಭಾರತೀಯ ಸೈನ್ಯ ಸಜ್ಜಾಗಿದೆ. ಪಾಕ್ ನಿಂದ ಬರುವ ಡ್ರೋನ್ಗಳನ್ನು ತಡೆಹಿಡಿಯುವುದಕ್ಕೆ ಹದ್ದುಗಳನ್ನು ಬಳಸುವುದಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ ಪ್ರಾತ್ಯಕ್ಷಿತೆಯನ್ನೂ ಕೂಡ ಮಂಗಳವಾರ ಉತ್ತರಾಖಂಡದಲ್ಲಿ ಪ್ರದರ್ಶಿಸಲಾಗಿದೆ.
ಶತ್ರುಗಳ ಜಾಡು ಹಿಡಿಯಲು ಪ್ರಸ್ತುತ ಶ್ವಾನಗಳನ್ನು ಬಳಕ ಮಾಡಲಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಹದ್ದುಗಳಿಗೆ ತರಬೇತಿ ನೀಡಲಾಗುತ್ತಿದೆ. ಡ್ರೋನ್ ಮೇಲೆ ನಿಗಾ ಇಡಲು ವಿಶೇಷ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತ್ತಿದೆ. ಹದ್ದುಗಳ ದೃಷ್ಟಿಕೋನದಲ್ಲಿ ಸೂಕ್ಷ್ಮವಾದ ರಂಧ್ರಗಳನ್ನು ಅಳವಡಿಸಲಾಗಿದೆ. ಇದರಿಂದ ಹಲವು ಕಿ. ಮೀ ದೂರದಲ್ಲಿನ ವಸ್ತುಗಳನ್ನು ನಿಖರವಾಗಿ ಗುರುತಿಸಬಲ್ಲ ಸಾಮರ್ಥ್ಯ ಹೊಂದಿರುತ್ತದೆ ಹಾಗೂ ಹದ್ದುಗಳಿಗೆ , ಡ್ರೋನ್ ಮೇಲೆ ನಿಗಾ ಇಡಲು ಹೆಚ್ಚು ನೆರವಾಗಲಿದೆ. ಇದಕ್ಕಾಗಿ ವಿಶೇಷ ತಂಡ ತರಬೇತಿಯನ್ನು ನೀಡಲಾಗುತ್ತಿದೆ. ಇದರಿಂದ ಪಂಜಾಬ್ ,ಜಮ್ಮು-ಕಾಶ್ಮೀರ ,ಗಡಿಯಾಚೆಯಿಂದ ಬರುವ ಡ್ರೋನ್ ನ ಹಾವಳಿ ತಗ್ಗಿಸಲು ಸಹಾಯಕವಾಗಿದೆ. ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.