ನ್ಯೂಸ್ ನಾಟೌಟ್ : ಇನ್ನೂ ಬಾಳಿ ಬದುಕಬೇಕಾದ ಪುಟ್ಟ ಮಗು ಮಾರಕ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದೆ. ಕೊನೆಗೂ ಈಕೆಯನ್ನು ಬದುಕಿಸಿಕೊಳ್ಳುವ ಪ್ರಯತ್ನ ಸಫಲವಾಗಲೇ ಇಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಪೇಟೆಯಲ್ಲಿ ಹೋಟೆಲ್ ನೆಡಸುತ್ತಿದ್ದ ಯೋಗಿಶ್ ಎಂಬವರ ಮಗಳು ಖುಷಿ (೮) ಗೆ ಕಳೆದ ಕೆಲವು ತಿಂಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಈಕೆಯ ಚಿಕಿತ್ಸೆಗಾಗಿ ಹಲವಾರು ಮಂದಿ ದಾನಿಗಳು ನೆರವಾಗಿದ್ದರು. ದೇವರಿಗೆ ವಿಶೇಷ ಪೂಜೆಗಳನ್ನೂ ಮಾಡಿ ಖುಷಿ ಬದುಕಿ ಬರಲೆಂದು ಪ್ರಾರ್ಥಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಬುಧವಾರ ಮೃತಪಟ್ಟಿದೆ ಎಂದು ವರದಿಯಾಗಿದೆ. ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖುಷಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಇತ್ತ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.