ನ್ಯೂಸ್ ನಾಟೌಟ್ : ಮಕ್ಕಳು ಹುಟ್ಟುವುದು ಸಾಮಾನ್ಯ. ಆದರೆ ಇಲ್ಲೊಂದು ಮಗು ಹುಟ್ಟುತ್ತಲೇ ಬಾಲದೊಂದಿಗೆ ಭೂಮಿಗೆ ಬಂದು ಸುದ್ದಿಯಾಗಿದೆ. ಈ ಘಟನೆ ಈಶಾನ್ಯ ಮೆಕ್ಸಿಕೋದಲ್ಲಿ ನಡೆದಿದೆ.
ಎರಡು ತಿಂಗಳ ಹಿಂದೆ ನ್ಯೂವೊ ಲಿಯಾನ್ ನಲ್ಲಿರುವ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಆ ಜನಿಸಿದ ಮಗುವಿಗೆ ಬಾಲವಿರುವುದು ಕಂಡು ವೈದ್ಯರು, ನರ್ಸ್ ಗಳು ಹಾಗೂ ಪೋಷಕರಿಗೆ ಶಾಕ್ ಆಗಿದ್ದರು. ಬಾಲವು ಮೃದುವಾಗಿ 2 ಇಂಚು ಉದ್ದ ಇದ್ದು ಕೂದಲಿನಿಂದ ಕೂಡಿದ್ದ, ಕೆಳಭಾಗಕ್ಕೆ ಕಿರಿದಾಗಿದೆ. ಈ ಸುದ್ದಿ ತಿಳಿದ ಬಳಿಕ ಬಾಲದ ಚಿತ್ರಗಳು ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಮಗುವನ್ನು ಚಿಕ್ಕ ಆಪರೇಷನ್ ಗೆ ಒಳಪಡಿಸುವ ಮೂಲಕ ಬಾಲವನ್ನು ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.