ವರದಿ: ಶ್ರೀಜಿತ್ ಸಂಪಾಜೆ
ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ತೀರ ಅಪಾಯದಲ್ಲಿದ್ದ ಎಂಟು ಸೇತುವೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ದೊರಕಿದೆ. ಇದರ ಮೊದಲ ಹಂತವಾಗಿ ಸುಳ್ಯ ತಾಲೂಕಿನ ಕಲ್ಲುಗುಂಡಿ ಸಮೀಪದ ಕಡಪಾಲದಲ್ಲಿ ದೊಡ್ಡ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. 4.88 ಕೋಟಿ ರು. ವೆಚ್ಚದಲ್ಲಿ ಸೇತುವೆ ಕಾರ್ಯ ಆರಂಭಗೊಂಡಿದೆ.
ಕಡಪಾಲ ಸಮೀಪದ ಸೇತುವೆ ಹಲವು ಅಪಘಾತಕ್ಕೆ ಸಾಕ್ಷಿಯಾಗಿತ್ತು. ಇತ್ತೀಚೆಗೆ ಕೂಡ ಇಲ್ಲಿ ಅಪಘಾತವಾಗಿ ಜೀವ ಹಾನಿಯಾಗಿತ್ತು. ಇಂತಹ ಸೇತುವೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ , ಪುತ್ತೂರು ತನಕ ಒಟ್ಟು ಎಂಟು ಸೇaತುವೆ ಇದೆ. ಇದೀಗ ಎಲ್ಲ ಕಡೆಯೂ ಕೂಡ ದೊಡ್ಡ ಸೇತುವೆ ನಿರ್ಮಾಣಕ್ಕೆ ಕೆಲಸ ಆರಂಭವಾಗಿದೆ.
ಸೇತುವೆ ನಿರ್ಮಿಸಲು ಜಾಗದ ಕೊರತೆ ಉಂಟಾಗಿದೆ. ಹೀಗಾಗಿ ಸರಕಾರ ಪಕ್ಕದ ಜಮೀನಿನ ಮಾಲೀಕರಿಗೆ ಹಣ ನೀಡಿ ಜಮೀನನ್ನು ಖರೀದಿಸಿದೆ. ಈ ಮೂಲಕ ಸುಗಮ ಸಾರಿಗೆ ಸಂಚಾರಕ್ಕೆ ಸರಕಾರ ಎಲ್ಲ ಕ್ರಮವನ್ನೂ ಕೈಗೊಂಡಿದೆ. ಜನರ ಸುರಕ್ಷತೆ ಬಗ್ಗೆ ಸರಕಾರ ಮೊದಲ ಆದ್ಯತೆ ನೀಡುತ್ತದೆ ಎಂದು ತಿಳಿಸಲಾಗಿದೆ. ಸದ್ಯ ಕಡಪಾಲದಲ್ಲಿ ಮುಗುಳೋಡಿ ಕನ್ಸ್ ಸ್ಟ್ರಕ್ಷನ್ ಕಾವೂರು ಕಂಪನಿಯೂ ಸೇತುವೆ ನಿರ್ಮಾಣ ನಡೆಸುತ್ತಿದೆ. ಈ ಸೇತುವ ಮುಂದಿನ ಮೂರು ತಿಂಗಳಲ್ಲಿ ಸಂಪೂರ್ಣ ಕಾಮಗಾರಿಯಾಗಿ ವಾಹನ ಸವಾರರ ಸೇವೆಗೆ ಲಭ್ಯವಾಗಲಿದೆ ಎಂದು ಮುಖ್ಯ ಇಂಜೀನಿಯರ್ ಸುಧಾಕರ ಶೆಟ್ಟಿ, ಸಹಾಯಕ ಇಂಜಿನೀಯರ್ ಧನ್ವಿತ್ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯತ್ ಸಂಪಾಜೆ ಅಧ್ಯಕ್ಷ ಜೆ.ಕೆ.ಹಮೀದ್, ಹಲವು ಅಪಘಾತಕ್ಕೆ ಕಾರಣವಾಗಿದ್ದು ಸಣ್ಣ ಸೇತುವೆಯ ಬದಲಾವಣೆ ಅವಶ್ಯಕವಾಗಿತ್ತು. ಇದೊಂದು ಬೆಳವಣಿಗೆ ಸಂತಸ ತಂದಿದೆ ಎಂದು ತಿಳಿಸಿದರು .