ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಸುಳ್ಯದ ಕೆವಿಜಿ ಸಮೂಹ ಸಂಸ್ಥೆಗಳ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿಯಾಗಿ ಕುರುಂಜಿ ಡಾ ಕೆವಿ ಚಿದಾನಂದ ಅವರ ಸುಪುತ್ರ ಅಕ್ಷಯ್ ಕೆ.ಸಿ ಅವರು ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಡಾ ರೇಣುಕಾ ಪ್ರಸಾದ್ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾಗಿರುವ ಡಾ ಕೆವಿ ಚಿದಾನಂದ ಅವರು ಪ್ರಕಟಣೆ ಹೊರಡಿಸಿದ್ದಾರೆ. ಅದರಲ್ಲಿರುವ ಸಾರಾಂಶ ಇಂತಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ ರೇಣುಕಾ ಪ್ರಸಾದ್ ಕೆ.ವಿ ಹುದ್ದೆಯು ದಿನಾಂಕ ೪-೩-೨೦೨೨ರಿಂದ ಅನೂರ್ಜಿತಗೊಂಡಿರುತ್ತದೆ. ಅದಲ್ಲದೆ ಮಾನ್ಯ ಉಚ್ಛ ನ್ಯಾಯಾಲಯ ಬೆಂಗಳೂರು ಇದರ ದಾವೆ ಸಂಖ್ಯೆ ೧೧೧ ೭೭/೨೦೨೨ ದಿನಾಂಕ ೪-೧೧-೨೦೨೨ ಇದರ ತೀರ್ಪಿನ ಪ್ರಕಾರ ದಿನಾಂಕ ೪-೩-೨೦೨೨ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಎಲ್ಲ ನಿರ್ಣಯಗಳನ್ನು ಎತ್ತಿ ಹಿಡಿದಿದೆ. ದಿನಾಂಕ ೪-೩-೨೦೨೨ರಂದು ನಡೆದ ಸಭೆಯ ನಿರ್ಣಯದ ಪ್ರಕಾರ ಈ ಕೆಳಗಿನವರು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಆಡಳಿತ ಮಂಡಳಿ ಸದಸ್ಯರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಆಡಳಿತ ಮಂಡಳಿಯ ಸದಸ್ಯರು (ಪರಿಷ್ಕೃತ)
- ಡಾ. ಕೆವಿ ಚಿದಾನಂದ – ಅಧ್ಯಕ್ಷರು
- ಅಕ್ಷಯ್ ಕೆ.ಸಿ -ಪ್ರಧಾನ ಕಾರ್ಯದರ್ಶಿ
- ಹೇಮನಾಥ್ ಕೆವಿ – ಕಾರ್ಯದರ್ಶಿ
- ಡಾ ರೇಣುಕಾ ಪ್ರಸಾದ್ ಕೆವಿ -ಸದಸ್ಯರು
- ಶೋಭಾ ಚಿದಾನಂದ -ಸದಸ್ಯರು
- ಡಾ ಐಶ್ವರ್ಯ ಕೆ.ಸಿ -ಸದಸ್ಯರು
- ಡಾ ಗೌತಮ್ ಗೌಡ ಎ.ಜಿ – ಸದಸ್ಯರು
- ಡಾ ಜ್ಯೋತಿ ಆರ್.ಪ್ರಸಾದ್ – ಸದಸ್ಯರು
- ಡಾ ಅಭಿಜ್ಞಾ ಕೆ.ಆರ್ -ಸದಸ್ಯರು