ನ್ಯೂಸ್ ನಾಟೌಟ್ : ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡಿದರೆ ಶಿಕ್ಷಕರು ,ಬೈಯುವುದು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಶಿಕ್ಷಕ ವಿದ್ಯಾರ್ಥಿ ಮಗ್ಗಿ ಹೇಳದಕ್ಕೆ ಡ್ರಿಲ್ ಮಷಿನ್ ನಿಂದ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಕಾನ್ಪುರ ಜಿಲ್ಲೆಯ ಪ್ರೇಮನಗರ ಖಾಸಗಿ ಶಾಲೆಯೊಂದರಲ್ಲಿ ಸಿಸಮೌ ಎಂಬ ವಿದ್ಯಾರ್ಥಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ. ಕಳೆದ ಗುರವಾರದಂದು ಶಿಕ್ಷಕ ಅನುಜ್ ಪಾಂಡೆ ಶಾಲೆಯ ದುರಸ್ಥಿ ಕೆಲಸ ನೋಡಿಕೊಳ್ಳುತ್ತಿದ್ದಾಗ , ಸಮೀಪದಲ್ಲೇ ಹೋಗುತ್ತಿದ್ದ ಬಾಲಕ ಸಿಸಮೌ ನನ್ನು ಕರೆದು ಎರಡರ ಮಗ್ಗಿ ಹೇಳಲು ಕೇಳಿದ್ದಾರೆ. ಈ ವೇಳೆಗೆ ಬಾಲಕ ಸರಿಯಾಗಿ ಮಗ್ಗಿ ಹೇಳದಕ್ಕೆ ಶಿಕ್ಷಕ ಆಕ್ರೋಶಗೊಂಡಿದ್ದಾರೆ.
ಶಾಲೆಯಲ್ಲಿ ದುರಸ್ಥಿ ಕಾಮಗಾರಿಗೆ ತಂದಿದ್ದ ಡ್ರಿಲ್ಲಿಂಗ್ ಮಷಿನ್ ಅನ್ನು ಬಾಲಕನ ಕೈಗೆ ಇಟ್ಟು ಆನ್ ಮಾಡಿದ್ದಾನೆ. ಇದೇ ವೇಳೆಗೆ ಬಾಲಕ ಕೈ ಎಳೆಯುವಷ್ಟರಲ್ಲಿ ಆತನ ಕೈಯಲ್ಲಿ ಸಣ್ಣ ರಂಧ್ರವಾಗಿದೆ. ಸಿಸಮೌ ನ ಗೆಳೆಯ ಜೊತೆಗೆ ಇದ್ದ ಕಾರಣ ವಿದ್ಯುತ್ ಸಂಪರ್ಕವನ್ನು ಆಫ್ ಮಾಡಿದ ಕಾರಣ ಅನಾಹುತ ತಪ್ಪಿದೆ ಎಂದು ಹೇಳಲಾಗಿದೆ. ಅಂತಹ ಅನಾಹುತವಾದರೂ ಬಾಲಕನಿಗೆ ಯಾವುದೇ ಚಿಕಿತ್ಸೆ ನೀಡದೆ ಹಾಗೇ ಮನೆಗೆ ಕಳುಹಿಸಿದ್ದಾರೆ. ಶಾಲೆಯ ಉಸ್ತುವಾರಿ ಹೊಂದಿದ್ದ ಹಿರಿಯ ಶಿಕ್ಷಕರು ಕೂಡ ಈ ವಿಷಯವನ್ನು ಮನೆಯವರ ಜೊತೆ ಅಲ್ಲದೆ ಯಾರ ಬಳಿಯು ಹೇಳಿರಲಿಲ್ಲ.