ನ್ಯೂಸ್ ನಾಟೌಟ್ : ಕನ್ನಡ ಚಿತ್ರರಂಗಕ್ಕೆ ಕೊಡಗಿನಿಂದ ನಟಿ ಪ್ರೇಮಾ, ಡೈಸಿ ಬೋಪಣ್ಣ. ಹರ್ಷಿಕಾ ಪೂಣಚ್ಚ, ರಶ್ಮಿಕಾ ಮಂದಣ್ಣ ಪ್ರವೇಶಿಸಿದ್ದರು. ಇದೀಗ ಈ ಸಾಲಿಗೆ ಯುವ ನಟಿ ಮಧುರಾ ಸುರೇಶ್ ಹೆಸರೂ ಸೇರಿಕೊಂಡಿದೆ. ರೆಡ್ ರಮ್ ಎಂಬ ಸಿನಿಮಾದಲ್ಲಿ ಕುಶಾಲ ನಗರದ ಮಧುರಾ ಸುರೇಶ್ ನಟಿಸುವ ಅವಕಾಶ ಪಡೆದಿದ್ದಾರೆ.
ಕುಶಾಲನಗರ ನಿವಾಸಿ ಬೆಳ್ಯನ್ ಬಬಿತಾ ಮತ್ತು ಸುರೇಶ್ ದಂಪತಿಗಳ ಪುತ್ರಿ ಮಧುರಾ ಸುರೇಶ್ ಕನ್ನಡ ಚಿತ್ರತಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಾಡ್ಲಿಂಗ್ ಮತ್ತು ನಟನಾ ಕ್ಷೇತ್ರದಲ್ಲಿ ತರಬೇತಿ ಪಡೆದಿರುವ ಇವರು ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ಫಿಲ್ಮ್ಸ್ ಲಾಂಛನದಡಿ ಪ್ರಾರಂಭಗೊಂಡಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಉತ್ತರ ಪ್ರದೇಶದ ವಿವಿಧೆಡೆ ನಡೆಯಲಿದೆ.