ನ್ಯೂಸ್ ನಾಟೌಟ್: ಲವ್ ಜಿಹಾದ್ ಪ್ರಕರಣಗಳು ಕಳೆದ ಕೆಲವು ತಿಂಗಳಿನಿಂದ ಭಾರಿ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ಈ ಬೆನ್ನಲ್ಲೇ ಬಲವಂತದ ಮತಾಂತರ ಪ್ರಕರಣಗಳು ಕೂಡ ಕರಾವಳಿಯಲ್ಲಿ ಸದ್ದು ಮಾಡುತ್ತಿವೆ. ಮಂಗಳೂರಿನ ವೈದ್ಯೆಯೊಬ್ಬಳು ಹಿಂದೂ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಬಲವಂತದ ಮತಾಂತರಕ್ಕೆ ಯತ್ನಿಸಿದ್ದಾಳೆ ಅನ್ನುವ ದೂರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಈ ಬಗ್ಗೆ ಇದೀಗ ಮಂಗಳೂರಿನ ಪ್ರಸಿದ್ಧ ಹೆರಿಗೆ ವೈದ್ಯೆಯಾಗಿರುವ ಡಾ ಜಮೀಲಾ ಸಹಿತ ಹಲವು ಮುಸ್ಲಿಂ ಯುವಕರ ಮೇಲೆ ದೂರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಹಿಂದೂ ಯುವತಿಯೋರ್ವಳು ಫ್ಯಾನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ತನ್ನ ರೀಚಾರ್ಜ್ ಗಾಗಿ ಖಲೀಲ್ ಎಂಬಾತನ ಮೊಬೈಲ್ ಅಂಗಡಿಗೆ ಹೋಗಿದ್ದಳು. ಈ ವೇಳೆ ಆತ ನಿನಗೆ ಇದಕ್ಕಿಂತಲೂ ಒಳ್ಳೆಯ ಕೆಲಸ ಕೊಡುತ್ತೇನೆ ಎಂದು ಹೇಳಿ ತನ್ನ ಕುಟುಂಬಸ್ಥರ ಮನೆಗೆ ಕರೆಸಿಕೊಂಡು ಆಕೆಯನ್ನು ಸಂಬಂಧಪಟ್ಟವರಿಗೆ ಪರಿಚಯಿಸಿದ್ದ. ಈ ವೇಳೆ ಈಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಬೇಕು. ಅಲ್ಲದೆ ಕುರಾನ್ ಓದಲು ಕಲಿಯಬೇಕು ಎಂದು ಯುವತಿಗೆ ಮಹಿಳೆಯರು ಹೇಳಿದ್ದರು. ಒತ್ತಾಯ ಪೂರ್ವಕವಾಗಿ ನಮಾಝ್ ಮಾಡಿಸುತ್ತಿದ್ದರು. ಇವರ ಮಾತಿಗೆ ಈಕೆ ವಿರೋಧ ವ್ಯಕ್ತಪಡಿಸಿದಾಗ ಆಕೆಗೆ ಜೀವ ಬೆದರಿಕೆ ಕೂಡ ಹಾಕಲಾಗಿತ್ತು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಪೊಲೀಸರು ಐಪಿಸಿ ೩೫೪, ೩೫೪(ಎ), ೫೦೫, ೩೪ ಹಾಗೂ ಕರ್ನಾಟಕ ಮತಾಂತರ ನಿಷೇದ ಕಾಯಿದೆ ೨೦೨೨ ಕಾಲಂ ೩ ಮತ್ತು ೫ ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.