ಮಂಗಳೂರು: ಇಂದು ನಾಡಿನೆಲ್ಲೆಡೆ ನಾಗರಪಂಚಮಿ ಹಬ್ಬದ ಸಂಭ್ರಮ. ಆದರೆ, ಕೊರೊನಾ ಸಾಂಕ್ರಾಮಿಕ ರೋಗ ಹಬ್ಬದ ಆಚರಣೆಗೆ ಅಡ್ಡಿಯಾಗಿದೆ. ಈ ನಡುವೆಯೂ ಭಕ್ತಾದಿಗಳು ನಾಗನಿಗೆ ಸೀಯಾಳ, ಪಿಂಗಾರ, ಹೂ-ಹಣ್ಣುಗಳನ್ನು ಹೊರಗಿನಿಂದಲೇ ಸಮರ್ಪಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮಂಗಳೂರಿನ ಇತಿಹಾಸ ಪ್ರಸಿದ್ದ ಶರವು ದೇವಾಲಯದಲ್ಲಿ ಸರಕಾರದ ಮಾರ್ಗ ಸೂಚಿಯಂತೆ ಆ.13ರಂದು ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು. ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧ ಹಿನ್ನೆಲೆ ಶರವು ದೇವಾಲಯದ ಹತ್ತಿರದಲ್ಲಿರುವ ಉಮಾಮಹೇಶ್ವರ ದೇವಸ್ಥಾನದಲ್ಲಿ ಭಕ್ತಾಧಿಗಳು ಬೆರಳೆಣಿಕೆಯಲ್ಲಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ನಾಗರಪಂಚಮಿ ಆಚರಿಸಿದರು. ಎಲ್ಲಾ ಪ್ರಸಿದ್ಧ ದೇವಾಲಯಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಸರಳವಾಗಿ ನಾಗರಪಂಚಮಿ ಆಚರಿಸಲಾಗುತ್ತಿದೆ.
- +91 73497 60202
- [email protected]
- November 23, 2024 4:28 PM