ನವದೆಹಲಿ: ‘ಆಧಾರ್ ಕಾರ್ಡ್ನ ಮೂಲ ಅಥವಾ ಎಲೆಕ್ಟ್ರಾನಿಕ್ ಪ್ರತಿ ಸ್ವೀಕರಿಸುವಾಗ ಅದರ ಅಸಲಿಯತೆಯನ್ನು ಪರಿಶೀಲಿಸಿ’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ರಾಜ್ಯ ಸರ್ಕಾರಗಳು ಹಾಗೂ ಇತರೆ ಸಂಸ್ಥೆಗಳಿಗೆ ಗುರುವಾರ ಸೂಚಿಸಿದೆ.
‘ಸಮಾಜ ವಿರೋಧಿ ಶಕ್ತಿಗಳು ಆಧಾರ್ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಈ ನಿರ್ದೇಶನ ನೀಡಲಾಗಿದೆ’ ಎಂದು ಯುಐಡಿಎಐ ಹೇಳಿದೆ. ಕಳೆದ ಕೆಲವು ತಿಂಗಳಿನಿಂದ ನಕಲಿ ಆಧಾರ್ ಕಾರ್ಡ್ ಗಳ ಹಾವಳಿ ಹೆಚ್ಚುತ್ತಿದೆ. ಇದರಿಂದಾಗಿ ಅಸಲಿ ಮತ್ತು ನಕಲಿ ನಡುವಿನ ವ್ಯತ್ಯಾಸವೇ ಜನರಿಗೆ ತಿಳಿಯದಾಗಿದೆ. ಈ ನಿಟ್ಟಿನಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ.