ನ್ಯೂಸ್ ನಾಟೌಟ್ : ಕ್ಯಾನ್ಸರ್ ನಂತ ಮಹಾರೋಗಕ್ಕೆ ತುತ್ತಾಗಿ ಕೆಲವರು ನರಳುತ್ತಿರುತ್ತಾರೆ. ಅಂತಹ ರೋಗಿಗಳಿಗಾಗಿ ಸುಳ್ಯದ ಪುಟ್ಟ ಹೃದಯವೊಂದು ಮಿಡಿದಿದೆ. ವಿದ್ಯಾರ್ಥಿನಿಯೊಬ್ಬಳು ಕ್ಯಾನ್ಸರ್ ಪೀಡಿತರಿಗೆ ತನ್ನ ಕೇಶವನ್ನು ದಾನ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾಳೆ.
ಸುಳ್ಯದ ಪೇರಾಲಿನ ಅಳಂಕಲ್ಯ ನಿವಾಸಿ ದರ್ಶನ್ ಮತ್ತು ರೇಖಾಶ್ರೀ ದಂಪತಿಗಳ ಪುತ್ರಿ ಕು.ನಿಧಿ ಕೆ.ಡಿ. ಇವರು ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ೨ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಉದಯ ಭಾಸ್ಕರ್ ನಡೆಸುವ ಅಮೃತ ಗಂಗಾ ಸಮಾಜ ಸೇವಾ ಸಂಸ್ಥೆಯ ಮೂಲಕ ತನ್ನ ಕೂದಲನ್ನು ದಾನ ಮಾಡಿದ್ದಾಳೆ.