ನ್ಯೂಸ್ ನಾಟೌಟ್: ದೇಹಗಳ ಮೇಲೆ ಟ್ಯಾಟೋ ಹಾಕಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಹುಚ್ಚು ದಂಪತಿ ಕಣ್ಣಿಗೂ ಟ್ಯಾಟೊ ಹಾಕಿ ವಿಶ್ವ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.
ಅರ್ಜೆಂಟೀನಾದ ಗೇಬ್ರಿಯೆಲಾ ಪೆರಾಲ್ಟಾ ಮತ್ತು ವಿಕ್ಟರ್ ಹ್ಯೂಗೋ ಪೆರಾಲ್ಟಾ ಎಂಬ ದಂಪತಿಗಳಿಗೆ ಟ್ಯಾಟೊ ಎಂದರೆ ಬಹಳ ಇಷ್ಟವಂತೆ. ಹಾಗಾಗೀ ದೆಹದ ಯಾವುದೇ ಭಾಗವನ್ನು ಬಿಡದೆ ವಿಚಿತ್ರವಾದ ಚಿತ್ರ ಹಾಕಿಸಿಕೊಂಡಿದ್ದಾರೆ. ಇದೀಗ ದೇಹದ ಮೇಲೆ ಟ್ಯಾಟೊ ಬಿಡಿಸಿ ಗಿನ್ನೆಸ್ ವಿಶ್ವ ದಾಖಲೆ ಮಾಡಲು ಹೊರಟ ದಂಪತಿಗಳು.
ವಿಕ್ಟರ್ ಹ್ಯೂಗೋ ಪೆರಾಲ್ಟಾ ಗಿನ್ನೆಸ್ ವಿಶ್ವ ದಾಖಲೆಗೆ ತಮ್ಮ ದೇಹವನ್ನು ಬಳಸಿಕೊಂಡಿರುವ ಇವರು, ಟ್ಯಾಟೂಗಳು ನಮ್ಮನ್ನು ಒಳ್ಳೆಯ ಅಥವಾ ಕೆಟ್ಟ ವ್ಯಕ್ತಿಯನ್ನಾಗಿ ಮಾಡುವುದಿಲ್ಲ. ಇದೊಂದು ಕಲೆ ಅಷ್ಟೇ. ಕೆಲವರು ಇದನ್ನು ಮೆಚ್ಚುತ್ತಾರೆ, ಇನ್ನೂ ಕೆಲವರಿಗೆ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.
ಕಣ್ಣು, ಬಾಯಿ, ಮೂಗು, ನಾಲಿಗೆ ಸೇರಿದಂತೆ ಇವರಿಬ್ಬರ ದೇಹದಲ್ಲಿ ಬರೋಬ್ಬರಿ 98 ಟ್ಯಾಟೂಗಳಿವೆ. ಕಣ್ಣಿಗೂ ಟ್ಯಾಟೂ ಹಾಕಿಸಿಕೊಂಡಿರುವುದರಿಂದ ಕಣ್ಣು ಕಪ್ಪು ಮತ್ತು ಹಳದಿ ಬಣ್ಣಕ್ಕೆ ಮಾರ್ಪಾಡಾಗಿದೆ. ಇವರ ದೇಹದಲ್ಲಿ 50 ಪೀಯರ್ಸ್, 8 ಮೈಕ್ರೊಡರ್ಮಲ್, 14 ಬಾಡಿ ಇಂಪ್ಲಾಂಟ್ಗಳು, 5 ಡೆಂಟಲ್ ಇಂಪ್ಲಾಂಟ್ಗಳು, 4 ಇಯರ್ ಎಕ್ಸ್ಪಾಂಡರ್ಗಳು, 2 ಇಯರ್ ಬೋಲ್ಟ್ಗಳು ಮತ್ತು ಫೋರ್ಕ್ಡ್ ನಾಲಿಗೆ ಇವೆ. ಇಂತಹ ಟ್ಯಾಟೊ ನೋಡಿದರೆ ಯಾರಿಗೂ ಭಯ ಆಗಬಹುದು . ಇವರ ಅವತಾರ ಕಂಡು ಅನೇಕರು ಭಯಪಟ್ಟಿದ್ದಾರಂತೆ. ಇನ್ನು ಈ ದಂಪತಿ ಮೊದಲ ಬಾರಿಗೆ ಭೇಟಿಯಾಗಿದ್ದು, ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆದ ಮೋಟಾರ್ಸೈಕಲ್ ಈವೆಂಟ್ ನಲ್ಲಿ. ಇದು 24 ವರ್ಷಗಳ ಹಿಂದೆ ನಡೆದ ಘಟನೆಯಾಗಿದ್ದು, ಅಲ್ಲಿಂದ ಪರಿಚಯವಾದ ಇವರು ಮುಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಳಿಕ ವಿಶ್ವ ದಾಖಲೆ ನಿರ್ಮಿಸಬೇಕು ಎಂದು ಆಲೋಚಿಸಿದ ಇಬ್ಬರೂ ಒಪ್ಪಿಗೆ ಸೂಚಿಸಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ದೇಹ ಮಾರ್ಪಾಡು ಮಾಡಿಕೊಳ್ಳುವುದು ಕಲಾತ್ಮಕ ಅಭಿವ್ಯಕ್ತಿ ಮತ್ತು ಸ್ವಾತಂತ್ರ್ಯದ ಅಂತಿಮ ಸಂಕೇತವಾಗಿದೆ ಎಂದು ದಂಪತಿಗಳು ಹೇಳುತ್ತಾರೆ. ಗೇಬ್ರಿಯೆಲ್ಲಾಗೆ ಅತ್ಯಂತ ನೋವಿನ ಮಾರ್ಪಾಡು ಸ್ಕಾರ್ಫಿಕೇಶನ್ ಆಗಿತ್ತು. ವಿಕ್ಟರ್ಗೆ ನಾಲಿಗೆಯ ಪಿಗ್ಮೆಂಟೇಶನ್ ತುಂಬಾ ನೋವು ಕೊಟ್ಟಿತ್ತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಇದರಿಂದ ಒಂದು ಗಂಟೆಗಳ ಕಾಲ ಉಸಿರಾಡಲು ಸಹ ಕಷ್ಟವಾಗುವಂತೆ ಮಾಡಿತ್ತು ಎಂದು ವಿಕ್ಟರ್ ಹೇಳಿದ್ದಾರೆ.