ನ್ಯೂಸ್ ನಾಟೌಟ್ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ಗ್ರಹವು ರಾಶಿಯನ್ನು ಬದಲಾಯಿಸಿದಾಗ , ಅದು ಎಲ್ಲಾ ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಶುಕ್ರ ಡಿಸೆಂಬರ್ ೫ರಂದು ಧನು ರಾಶಿಗೆ ಪ್ರವೇಶಿಸಲಿದೆ. ಇದು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ. ಆದರೆ ಕೆಲವು ರಾಶಿಗಳ ಜನರು ಇದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಡಿಸೆಂಬರ್ 5ರಂದು ಸಂಜೆ 6:07 ಕ್ಕೆ ಶುಕ್ರ ಧನು ರಾಶಿಗೆ ಪ್ರವೇಶಿಸಲಿದ್ದಾನೆ ಮತ್ತು ಕೆಲ ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.
ಕುಂಭ: ಕುಂಭ ರಾಶಿಯ ಲಗ್ನ ಭಾವದಲ್ಲಿ ಶುಕ್ರನ ಈ ಸಂಚಾರ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಗಳ ಜನರ ಎಲ್ಲಾ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ಹೊಸ ಆದಾಯದ ಮೂಲಗಳೂ ತೆರೆದುಕೊಳ್ಳಲಿವೆ. ಇದೇ ವೇಳೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳೂ ಕೂಡ ಈ ಅವಧಿಯಲ್ಲಿ ಯಶಸ್ಸನ್ನು ಕಾಣಲಿವೆ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದ್ದು, ಮಕ್ಕಳಿಂದ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ.
ವೃಶ್ಚಿಕ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರನು ವೃಶ್ಚಿಕ ರಾಶಿಯ ದ್ವಿತೀಯ ಭಾವದಲ್ಲಿ ಸಾಗಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಯ ಜನರ ಜೀವನದಲ್ಲಿ ಸಂತೋಷ-ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗಲಿದೆ. ಇದೇ ವೇಳೆ ವಿದೇಶ ಪ್ರವಾಸದ ಸಾಧ್ಯತೆಯೂ ಗೋಚರಿಸುತ್ತಿದೆ. ಕುಟುಂಬದೊಂದಿಗೆ ಕಾಲ ಕಳೆಯಲು ಈ ಸಮಯ ಅನುಕೂಲಕರವಾಗಿದೆ. ಉದ್ಯೋಗದಲ್ಲಿಯೂ ಲಾಭವಾಗಲಿದೆ. ವ್ಯಾಪಾರದಲ್ಲಿ ಹೂಡಿಕೆಯಿಂದ ಕೂಡ ಲಾಭ ಸಿಗಲಿದೆ.
ಸಿಂಹ: ಈ ರಾಶಿಯ ಪಂಚಮ ಭಾವದಲ್ಲಿ ಶುಕ್ರ ಈ ಸಂಚಾರ ನಡೆಯಲಿದೆ. ಈ ಸ್ಥಾನ ಪ್ರೀತಿಯ ತಾಣ ಪರಿಗಣಿಸಲಾಗುತ್ತದೆ. ಈ ಶುಕ್ರ ಸಂಚಾರದಿಂದ ಸಿಂಹ ರಾಶಿಯವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಈ ರಾಶಿಯ ಮೂರನೇ ಮತ್ತು ಹತ್ತನೇ ಮನೆಗಳಿಗೆ ಶುಕ್ರ ಅಧಿಪತಿ. ಹೀಗಾಗಿ ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಯಶಸ್ಸು ಸಿಗಲಿದೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಸಹ ಯಶಸ್ಸನ್ನು ಪಡೆಯುತ್ತಾರೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ.
ಮೇಷ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯ ಅದೃಷ್ಟದ ಭಾವದಲ್ಲಿ ಶುಕ್ರನ ಈ ಸಂಚಾರ ನಡೆಯಲಿದೆ. ಮೇಷ ರಾಶಿಯ ಏಳನೇ ಮನೆಗೆ ಶುಕ್ರ ಅಧಿಪತಿ. ಇದನ್ನು ಸಂಪತ್ತಿನ ಮನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮೇಷ ರಾಶಿಯವರಿಗೆ ಶುಕ್ರ ಸಂಚಾರ ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ, ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ವ್ಯಕ್ತಿಯ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿಯೂ ಲಾಭವಾಗಲಿದೆ.