ನ್ಯೂಸ್ ನಾಟೌಟ್: ಕರ್ನಾಟಕ ಹಾಲು ಮಹಾಮಂಡಳಿ ( ಕೆ ಎಂ ಎಫ್) ಗುರುವಾರದಿಂದ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ನಂದಿನಿ ಹಾಲು ಮತ್ತು ಮೊಸರು ಮಾರಾಟ ದರವನ್ನು ಪ್ರತೀ ಲೀಟರಿಗೆ ತಲಾ 2 ರೂ. ಹೆಚ್ಚಳ ಮಾಡಿದೆ.
ರಾಜ್ಯದ ೧೪ ಹಾಲು ಒಕ್ಕೂಟಗಳು ಹಿಂಡಿ ಸೇರಿದಂತೆ ವಿವಿದ ವಸ್ತುಗಳ ದರ ಏರಿಕೆ ಹಿನ್ನಲೆಯಲ್ಲಿ ಪ್ರತಿ ಲೀಟರಿಗೆ ಹಾಲಿಗೆ 5 ರೂ ಹೆಚ್ಚಳ ಮಾಡುವಂತೆ ಕಳೆದ ಹತ್ತು ತಿಂಗಳಿಂದ ಒತ್ತಾಯಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಕೋರಿಕೆ ಬಂದಿತ್ತು. ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ಮುಖ್ಯಮಂತ್ರಿಯವರು ಸೂಚನೆ ಕೊಟ್ಟಿದ್ದರು. ಸೂಚನೆಯ ಮೆರೆಗೆ ಬುಧವಾರ ಕೆ ಎಂ ಎಫ್ ಆಡಳಿತ ಮಂಡಳಿಯಿಂದ ಸಭೆ ಸೇರಿ ಪ್ರತೀ ಲೀಟರಿಗೆ ತಲಾ 2 ರೂ. ನಂತೆ ಹೆಚ್ಚಳ ಮಾಡುವಂತೆ ನಿರ್ಧರಿಸಿದ್ದಾರೆ.