ನ್ಯೂಸ್ ನಾಟೌಟ್: ಕಾಂತಾರ ಸಿನಿಮಾ 400 ಕೋಟಿ ರೂ.ವಿಗೂ ಅಧಿಕ ಮೊತ್ತವನ್ನು ಬಾಚಿ ದಾಖಲೆ ನಿರ್ಮಿಸಿದೆ. ಈ ಬೆನ್ನಲ್ಲೇ ಒಟಿಟಿ, ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಗುರುವಾರ ಪ್ರದರ್ಶನಗೊಂಡಿದೆ. ಈ ಬೆನ್ನಲ್ಲೇ ಸಿನಿಮಾದ ಇಡೀ ಮೂಡ್ ಬದಲಾಯಿಸುವ ಹಾಡು ‘ವರಾಹ ರೂಪಂ’ ಒಟಿಟಿ ಹಾಗೂ ಅಮೆಜಾನ್ ಪ್ರೈಂನಲ್ಲಿ ಪ್ರದರ್ಶನ ಗೊಳ್ಳುತ್ತಿಲ್ಲ. ಇದು ಅಭಿಮಾನಿಗಳಿಗೆ ಭಾರಿ ನಿರಾಸೆ ತಂದಿದೆ ಎಂದು ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕಾಂತರ ಸಿನಿಮಾದ ಪ್ರಮುಖ ಹಾಡು ‘ವರಾಹ ರೂಪಂ’ ವಿವಾದ ನ್ಯಾಯಾಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿ ನೀಡದಿರುವುದರಿಂದ ಒಟಿಟಿ, ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿಲ್ಲ. ಸದ್ಯ ಕಾಂತಾರ ಸಿನಿಮಾ ನಿರ್ಮಾಪಕರಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಕೇರಳದ ಥೈಕುಡಂ ಬ್ರಿಜ್ ಎಂಬ ಮ್ಯೂಸಿಕ್ ಬ್ಯಾಂಡ್ ಕೃತಿಚೌರ್ಯದ ಆರೋಪವನ್ನು ಹೊರಿಸಿತ್ತು. ಥೈಕುಡಂ ಬ್ರಿಜ್ ನ ‘ನವರಸಂ ‘ ಹಾಡಿನಲ್ಲಿರುವ ಟ್ಯೂನ್ ಅನ್ನು ವರಾಹ ರೂಪಂ ನಲ್ಲಿ ಯತ್ತಾವತ್ ಬಳಸಲಾಗಿದೆ ಎಂದು ಕೇರಳದ ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಆದೇಶವನ್ನು ಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಹೊಂಬಾಳೆ ಫಿಲ್ಮ್ಸ್ ಪ್ರಶ್ನಿಸಿತ್ತು. ಆದರೆ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ.