ನ್ಯೂಸ್ ನಾಟೌಟ್ : ಕೆರೆಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಪುತ್ತೂರಿನ ವೀರಮಂಗಲದಲ್ಲಿ ನ.24ರಂದು ನಡೆದಿದೆ.
ವೀರಮಂಗಲ ನಿವಾಸಿ ಕೃಷ್ಣಪ್ಪ ಅವರ ಪತ್ನಿ ಮೃತಪಟ್ಟವರು. ಅಕ್ಕಮ್ಮ ಅವರು ಬೆಳಗ್ಗೆ ಮನೆಯಿಂದ ನೀರು ತರಲು ಎಂದು ತೋಟದಲ್ಲಿರುವ ಕೆರೆಗೆ ಹೋಗಿದ್ದರು. ನೀರು ತರುವ ವೇಳೆಗೆ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಸಮಯ ಕಳೆದರು ನೀರು ತರಲು ಹೋದ ಅಕ್ಕಮ್ಮ ಇನ್ನೂ ಬಂದಿಲ್ಲ ಎಂದು ಮನೆಯವರು ಹುಡುಕಾಡಿದರು. ಸ್ವಲ್ಪ ಕಾಲದ ಬಳಿಕ ಅವರ ಮೃತ ದೇಹ ತೋಟದಲ್ಲಿರುವ ಕೆರೆಯಲ್ಲಿ ಪತ್ತೆಯಾಗಿತ್ತು. ಮೃತರ ಪತಿ ಕೃಷ್ಣಪ್ಪ ತನ್ನ ಮಗಳನ್ನು ಅಗಲಿದ್ದು, ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಮಗ ಚಂದ್ರಶೇಖರ್ ಮೃತಪಟ್ಟಿದ್ದರು.