ನ್ಯೂಸ್ ನಾಟೌಟ್ : ಚಲಿಸುತ್ತಿದ್ದ ವಿಮಾನದಲ್ಲಿ ಹಠಾತ್ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಗೆ ಮಂಗಳೂರಿನ ವೈದ್ಯೆಯೊಬ್ಬರು ಸಕಾಲದಲ್ಲಿ ನೆರವಾಗಿ ಚಿಕಿತ್ಸೆ ನೀಡಿದ್ದಾರೆ. ನ. 23 ರಂದು ಈ ಘಟನೆ ನಡೆದಿದೆ.
ದುಬೈನಿಂದ ಮಂಗಳೂರಿಗೆ ಹೊರಟ ವಿಮಾನದಲ್ಲಿ ರಾತ್ರಿ 7-30ರ ವೇಳೆಗೆ ಪ್ರಯಾಣಿಕರೊಬ್ಬರಲ್ಲಿ ತೀವ್ರ ಅನಾರೋಗ್ಯ ಸಮಸ್ಯೆ ಕಾಡಿತು. ಈ ಕೂಡಲೇ ಪೈಲಟ್ ನ ಸೂಚನೆ ಮೇರೆಗೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರು ಮೂಲದ ವೈದ್ಯೆ ತಾಜೇಶ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದರು. ಬಳಿಕ ಅಸ್ವಸ್ಥರಾದ ಪ್ರಯಾಣಿಕನು ಆರೋಗ್ಯದಲ್ಲಿ ಚೇತರಿಸಿದರು. ವೈದ್ಯರ ಸಮಯ ಪ್ರಜ್ಞೆ ಮತ್ತು ಸೇವೆಯ ಕುರಿತು ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.