ನ್ಯೂಸ್ ನಾಟೌಟ್: ಭಾರತದಾದ್ಯಂತ ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಖಾತೆ ಹೊಂದಿರುವ ಲಕ್ಷಾಂತರ ಉದ್ಯೋಗಿಗಳು ಇದ್ದಾರೆ .
ಉದ್ಯೋಗಿಗಳು ತಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ, ಸಂಬಳದ ಒಂದು ಭಾಗವನ್ನು ಪಿಎಫ್ನಲ್ಲಿ ವಿನಿಯೋಗಿಸಿರುತ್ತಾರೆ. ಮುಂದೊಂದು ದಿನ ಎಲ್ಲಾ ಹಣವು ಆ ವ್ಯಕ್ತಿ ನಿವೃತ್ತರಾದಾಗ ನೇರವಾಗಿ ಖಾತೆದಾರರಿಗೆ ಸೇರುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ, ಅನಾರೋಗ್ಯ, ಮಗುವಿನ ಶಿಕ್ಷಣ ಅಥವಾ ಮದುವೆಯಂತಹ ಹಣಕಾಸಿನ ತುರ್ತು ಸ್ಥಿತಿಯಲ್ಲೂ ನಿಮಗೆ ಅಗತ್ಯವಿದ್ದರೆ ಈ ಹಣವನ್ನು ನೀವು ಬಳಸಿಕೊಳ್ಳಲು ಅವಕಾಶವಿದೆ.
ಇತ್ತೀಚಿನ ದಿನದಲ್ಲಿ ಸೈಬರ್ ಕ್ರೈಂ ಘಟನೆಗಳು ಹೆಚ್ಚಾಗುತ್ತಿವೆ. ಅದೇರೀತಿ ಉದ್ಯೋಗಗಳನ್ನು ಬದಲಾಯಿಸುವಾಗ ಜನರು ವಂಚನೆಗೆ ಒಳಗಾಗುತ್ತಾರೆ . ಉದ್ಯೋಗ ಬದಲಾವಣೆ ಸಂದರ್ಭದಲ್ಲಿ ವ್ಯಕ್ತಿಗಳ ಇಪಿಎಫ್ಒ ಮಾಹಿತಿಯನ್ನು ನವೀಕರಿಸುವ ನೆಪದಲ್ಲಿ ವ್ಯಕ್ತಿಗಳಿಂದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ. ನಂತರ ಈ ವಿವರಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಖಾತೆದಾರರ ಹಣವನ್ನು ದೋಚುತ್ತಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಬಹಿರಂಗಪಡಿಸಬೇಡಿ. ಇದರ ಜೊತೆಗೆ ನೀವು ವಂಚನೆಗೆ ಒಳಗಾದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ನೀವು ಹಣ ಕಳೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು.