ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಕೆಲವು ಕಡೆಗೆ ವಿದ್ಯುತ್ ಸಮಸ್ಯೆ ದೊಡ್ಡದಾಗಿ ಬಿಟ್ಟಿದೆ. ಪ್ರತಿ ದಿನ ಕರೆಂಟ್ ಇಲ್ಲ ಅನ್ನುವ ವಿಚಾರವೇ ಕೇಳಿ ಬರುತ್ತಿದೆ. ಈ ನಡುವೆ ನಾಳೆ (ನ.24) ಬೆಳಗ್ಗೆ 10 ರಿಂದ ಸಂಜೆ 6ರ ತನಕ ಪೂರ್ತಿ ಕರೆಂಟ್ ಇರುವುದಿಲ್ಲ ಎನ್ನುವ ಸುದ್ದಿ ಮೆಸ್ಕಾಂ ನಿಂದ ಹೊರಬಿದ್ದಿದೆ.
ಪುತ್ತೂರಿನ ನಗರ, ಕೆದಿಲ, ಕಬಕ, ವಾಟರ್ ಸಪ್ಲೈ , ಉಪ್ಪಿನಂಗಡಿ , ಎಕ್ಸ್ ಪ್ರೆಸ್ ಮತ್ತು ಕಾಂಚನ ಫೀಡರ್ ಗಳ ವಿದ್ಯುತ್ ಅನ್ನು ನಿಲುಗಡೆ ಮಾಡಲಾಗುತ್ತದೆ. 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಫಿಡರ್ ಗಳಿಂದ ವಿದ್ಯುತ್ ಸರಬರಾಜಾಗುವ ಉಪ್ಪಿನಂಗಡಿ ಗ್ರಾಮ , ನೆಕ್ಕಿಲಾಡಿ ಗ್ರಾಮ, ಕೊಡಿಪ್ಪಾಡಿ , ಪಡ್ನೂರು, ಮುರ, ಕಬಕ ಮತ್ತು ವಿದ್ಯಾಪುರ ಈ ಸ್ಥಳಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. 33 ಕೆ.ವಿ ಪುತ್ತೂರು ,ಕಡಬ, ಸುಬ್ರಹ್ಮಣ್ಯ ಹಾಗೂ 33 ಕೆ.ವಿ ಪುತ್ತೂರು, ಸವಣೂರು, ನೆಲ್ಯಾಡಿ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಮ್ಮಿಕೊಂಡಿರುವ ಕಾರಣ ಈ ಭಾಗಗಳಲ್ಲೂ ನಾಳೆಯ ದಿನ ವಿದ್ಯುತ್ ಇರುವುದಿಲ್ಲ. ಹಾಗಾಗೀ ಎಲ್ಲಾ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮನವಿ ಮಾಡಲಾಗಿದೆ. ಪುತ್ತೂರಿನಲ್ಲಿ ಅಪಾಯಕಾರಿ ಮರಗಳ ತೆಗಿಯುವುದರ ಉದ್ದೇಶದಿಂದ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ.