ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಕೋಮುಗಲಭೆಯ ಘರ್ಷಣೆ ಹೆಚ್ಚಾಗುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಹಿಂದೂ-ಮುಸ್ಲಿಂ ಒಂದಾಗಿ ಶಿವನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ ಅಪರೂಪದ ಘಟನೆ ನಡೆದಿದೆ.
ಕೇರಳದ ಕಣ್ಣೂರಿನ ತೆರ್ಲಾಯಿ ದ್ವೀಪದಲ್ಲಿ ಸುಮಾರು 600 ವರ್ಷಕ್ಕೂ ಹಳೆಯದಾದ ಶಿವನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ.ದೇವಾಲಯವನ್ನು ಪುನರುಜ್ಜೀವನಗೊಳಿಸಲು ಚೆಂಗಲಾಯಿ ಪಂಚಾಯಿತಿನ ಜನತೆ ಕೈಜೋಡಿಸಿದ್ದಾರೆ. ಲಾವಿಲ್ ಶಿವದೇವಾಲಯವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದು,ದೇವಾಲಯವನ್ನು ನಿರ್ವಹಿಸುವವರು ದೈನಂದಿನ ಆಚರಣೆಗಳನ್ನು ನಡೆಸಲು ಸಾಕಷ್ಟು ಆರ್ಥಿಕ ಸಂಪನ್ಮೂಲಗಳನ್ನು ಹುಡುಕಲು ಹೆಣಗಾಡುತ್ತಿದ್ದರು. ಇದೇ ಹೊತ್ತಿನಲ್ಲಿ -ಮುಸ್ಲಿಂ ಸಮುದಾಯ ಕೈ ಜೋಡಿಸಿ ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಕೈ ಜೋಡಿಸಿದ್ದಾರೆ. ಹಾಗೂ ಈ ದೇವಾಲಯವನ್ನು ಪುನರ್ ನಿರ್ಮಾಣಗೊಳಿಸಿ ವಿಶೇಷ ಪೂಜಾವಿಧಿಗಳು ನಡೆಯಲಿದೆ. ಹೆಚ್ಚಿನ ಅಭಿವೃದ್ಧಿಗಾಗಿ ಜಾಗವನ್ನು ಹಂಚಿಕೊಂಡಿದ್ದು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಪ್ರವಾಸೋದ್ಯಮ ಯೋಜನೆಗೆ ಈ ಸ್ಥಳವನ್ನು ಸೇರಿಸಲು ಉದ್ದೇಶಿಸಿದ್ದು. ಅದಕ್ಕಾಗಿ ೨೫-೩೦ ಲಕ್ಷ ರೂ ಬೇಕಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಮ್.ಗಿರೀಶ್, ಚಂಗಲಾಯಿ ಪಂಚಾಯತಿ ಅಧ್ಯಕ್ಷ ಮೋಹನ ಹಾಗೂ ಮುಸ್ಲಿಂ ಯೂನಿಯನ್ ಕಾರ್ಯದರ್ಶಿ ಮೂಸನಕುಟ್ಟೆ ತೇರ್ಲಾಯಿ, ಯೂತ್ ಲೀಗ್ ಅಧ್ಯಕ್ಷ ಸಯ್ಯದ್ ಅಲಿ ಸಿಹಾಬ್ ರರು ತಿಳಿಸಿದ್ದಾರೆ.