ಮಂಗಳೂರು: ತನಿಖಾ ಶ್ರೇಷ್ಠತೆಗಾಗಿ 2021ನೇ ಸಾಲಿನಲ್ಲಿ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 152 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ ನೀಡಿ ಗೌರವಿಸಲಾಗಿದೆ. ಮಂಗಳೂರು ಡಿವೈಎಸ್ಪಿ ಪರಮೇಶ್ವರ್ ಹೆಗ್ಡೆ, ಸಿಸಿಬಿ ಬೆಂಗಳೂರಿನ ಎಸಿಪಿ ಎಚ್.ಎನ್.ಧರ್ಮೇಂದ್ರ, ಡಿವೈಎಸ್ಪಿ ಸಿ.ವೈ.ಬಾಲಕೃಷ್ಣ , ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಟಿ.ವಿ.ದೇವರಾಜ್, ಮನೋಜ್ ಹೂವಳೆ, ಶಿವಪ್ಪ ಸತ್ತೆಪ್ಪ ಕಮ್ಮಟಗಿ ಅವರುಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ ಅಪರಾಧ ತನಿಖೆಯ ಉನ್ನತ ವೃತ್ತಿಪರ ಗುಣಮಟ್ಟಕ್ಕಾಗಿ ದೇಶದಾದ್ಯಂತ 28 ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು 152 ಪೊಲೀಸ್ ಅಧಿಕಾರಿಗಳಿಗೆ ಈ ಪದಕವನ್ನು ನೀಡಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯವು ಗುರುವಾರ ಹೇಳಿದೆ.
- +91 73497 60202
- [email protected]
- November 23, 2024 11:10 PM