ನ್ಯೂಸ್ ನಾಟೌಟ್ : ಕತ್ತಲೆಯನ್ನು ತೊರೆದು ಬೆಳಕಿನ ಪ್ರತೀಕವಾಗಬೇಕಾದ ಜ್ಞಾನದ ದೇಗುಲದಲ್ಲಿ ಈಗ ಅರಿವು ಇಲ್ಲದಂತಾಗಿದೆ. ವಿಧ್ಯಾಭ್ಯಾಸ ಪಡೆಯಲು ಮಕ್ಕಳು ಶಾಲೆಯನ್ನೇ ಅವಲಂಬಿಸಿರುತ್ತಾರೆ, ಆದರೆ ವಿದ್ಯೆಯನ್ನು ಕಲಿಸುವ ದೇವಾಲಯದಲ್ಲಿ ಈಗ ದೇವರಿಲ್ಲದಂತಾಗಿದೆ.
ಹೌದು, ಆದಿವಾಸಿ ಮಕ್ಕಳೇ ಹೆಚ್ಚಾಗಿರುವ ದಕ್ಷಿಣ ಕೊಡಗಿನ ನಾಣಚ್ಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕನಾದ (ಎಸ್. ಪಿ. ಕೃಷ್ಣ) ಕಳೆದ ನಾಲ್ಕು ವರ್ಷದಿಂದ ಶಾಲೆಗೆ ಸುದೀರ್ಘವಾಗಿ ಅನಧಿಕೃತ ರಜೆ ಹಾಕಿದ್ದು ಶಿಕ್ಷಕನಿಲ್ಲದೆ ಮಕ್ಕಳು ಕಂಗಾಲಾಗಿರುವ ಪರಿಸ್ಥಿತಿ ಮಡಿಕೇರಿಯಿಂದ ವರದಿಯಾಗಿದೆ.
ದಕ್ಷಿಣ ಕೊಡಗಿನ ಕಟ್ಟೆಪಾಳ್ಯ, ಬೇಗೂರು , ಕೋದಮೂಲೆ , ನಾಣಚ್ಚಿಗದ್ದೆ ಹಾಡಿಯ ಸುಮಾರು ೬೦ ಕ್ಕೂ ಅಧಿಕ ಮಕ್ಕಳು ನಾಣಚ್ಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಇಬ್ಬರು ಮಾತ್ರ ಪೂರ್ಣ ಪ್ರಮಾಣದ ಶಿಕ್ಷಕರು ಇರುವುದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುಣಮಟ್ಟ ಕಸಿತವಾಗಿದೆ. ಎಸ್. ಪಿ. ಕೃಷ್ಣ ಎಂಬವರು ಕಳೆದ ನಾಲ್ಕು ವರ್ಷದಿಂದ ಶಾಲೆಗೆ ಸತತವಾಗಿ ರಜೆ ಹಾಕಿದ್ದಾರೆ . ಅಪರೂಪಕ್ಕೆ ಒಂದು ಬಾರಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದು ನಿರಂತರವಾಗಿ ರಜೆ ಹಾಕಿ ಸುತ್ತಾಡುತ್ತಿದ್ದರು .ಇದರಿಂದ ಮಕ್ಕಳ ಪಾಠ ಪ್ರವಚನ, ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಹಾಗೂ ೧೨೦ ವಿದ್ಯಾರ್ಥಿಗಳ ಸಂಖ್ಯೆ ೬೦ ಕ್ಕೆ ಇಳಿಕೆಯಾಗಿದೆ. ಇದರಿಂದ ಹಚ್ಚಿನ ವಿದ್ಯಾರ್ಥಿಗಳು ಕಂಗಾಲಾಗುತ್ತಿದೆ ಎಂದು ಪೋಷಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ
ರಜೆಯಲ್ಲಿರುವ ಶಿಕ್ಷಕ ಕೃಷ್ಣ ಅವರಿಗೆ ಕಲವಾರು ಬಾರಿ ನೋಟಿಸ್ ನೀಡಲಾಗಿದೆ ಅಲ್ಲದೆ ವೇತನವನ್ನು ಸ್ಥಗಿತಗೊಳಿಸಲಾಗಿದೆ.ಆದರೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕನ ವರುದ್ದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದ್ದರೂ ಕೂಡಾ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ತನಿಖೆ ನಡೆಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಒ ವೇದಮೂರ್ತಿ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಶಿಕ್ಷಕನ್ನು ಹುದ್ದೆಯಿಂದ ವಜಾಮಾಡುವ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.