ನ್ಯೂಸ್ ನಾಟೌಟ್: ಜಗತ್ತಿನ ಸುತ್ತ ಹಲವು ಕೌತುಕದ ವಿಚಾರಗಳು ನಡೆಯುತ್ತಿರುತ್ತದೆ. ಅಂತಹುದೇ ಒಂದು ಅಚ್ಚರಿಯ ಸಂಗತಿ ಇದೀಗ ಸೂರ್ಯ ಗ್ರಹದಿಂದ ವರದಿಯಾಗಿದೆ.
ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಚ್ಚರಿಗೊಳಿಸುವ ವಿಡಿಯೊವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಯಾವುದೋ ಜೀವಿ ಹಾರಡುವ ರೀತಿ ಕಾಣುತ್ತದೆ. ಸೂರ್ಯನ ತಾಪಮಾನಕ್ಕೆ ಅಲ್ಲಿ ಯಾವುದೇ ಪ್ರಾಣಿ , ವಸ್ತು ಗಳು ಇರಲು ಸಾಧ್ಯವಿಲ್ಲ. ಆದರೆ ಈ ವಿಡಿಯೊದಲ್ಲಿ ಕಂಡುಬರುವ ದೃಶ್ಯ ಅಚ್ಚರಿಯನ್ನು ಮೂಡಿಸಿದೆ. ಹಾಗದರೆ ಸೂರ್ಯನಲ್ಲಿ ಕಂಡುಬಂದ ಆ ವಸ್ತು ಏನು ಎಂಬ ಪ್ರಶ್ನೆಗೆ ವಿಜ್ಞಾನಿಗಳು ಉತ್ತರಿಸಬೇಕಿದೆ! ಪ್ರತೀ ಸೆಕೆಂಡಿಗೆ ಬಾಹ್ಯಾಕಾಶದಲ್ಲಿ ಲೆಕ್ಕವಿಲ್ಲದಷ್ಟು ನಡೆಯುತ್ತಲೆ ಇರುತ್ತವೆ. ಇವುಗಳಲ್ಲಿ ಕೆಲವನ್ನು ಸಂಶೋಧನೆಯ ಮೂಲಕ ದಾಖಲಿಸಬಹುದು. ನಮ್ಮ ಸೌರವ್ಯೂಹದ ಮಧ್ಯಭಾಗದಲ್ಲಿರುವ ಸೂರ್ಯನಲ್ಲಿ ಇತ್ತೀಚೆಗೆ ಅಂತಹ ದೊಡ್ಡ ಘಟನೆ ಕಂಡುಬಂದಿದೆ. ಪ್ರತೀ ಕ್ಷಣವೂ ಸೂರ್ಯನೊಳಗೆ ಸರಣಿ ಸ್ಫೋಟಗಳು ನಡೆಯುತ್ತಿರುತ್ತದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿರುವ ಈ 11 ಸೆಕೆಂಡ್ ವಿಡಿಯೋದಲ್ಲಿ ನೀವು ಕ್ರಾಲ್ ಲೈಟ್ ಅನ್ನು ಸ್ಪಷ್ಟವಾಗಿ ನೋಡುತ್ತೀರಿ. ಇದು ಬೆಂಕಿಯ ಅಲೆಯಂತೆ ಕಾಣುತ್ತದೆ. ಇದನ್ನು ಸೌರ ತರಂಗ ಎಂದು ಕರೆಯಬಹುದು. ಉಳಿದ ಸ್ಫೋಟದಂತೆ ಈ ತರಂಗವೂ ಸ್ಫೋಟಗಳಿಂದ ಮಾಡಲ್ಪಟ್ಟಿದೆ. ವಿಜ್ಞಾನಿಗಳು ಅದಕ್ಕೆ ಸರ್ಪೆಂಟ್ ಇನ್ಸೈಡ್ ಸನ್ ಎಂದು ಹೆಸರಿಸಿದ್ದಾರೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ ಈ ವಿಡಿಯೊವನ್ನು 2 ವಾರಗಳ ಹಿಂದೆ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದು, ಇದುವರೆಗೆ 3.5 ಲಕ್ಷ ಬಾರಿ ವೀಕ್ಷಿಸಲಾಗಿದೆ.