ನ್ಯೂಸ್ ನಾಟೌಟ್ : ಉದ್ಯೋಗ ಕಡಿತ , ಹೊರಗುತ್ತಿಗೆ ಮತ್ತು ಬ್ಯಾಂಕಿಂಗ್ ಸಂಘಟನೆಗಳ ಪದಾಧಿಕಾರಿಗಳ ವಿರುದ್ದ ಉದ್ದೇಶಪೂರ್ವಕವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಶನಿವಾರ ಮುಷ್ಕರಕ್ಕೆ ಕರೆಕೊಟ್ಟಿದೆ .
ಬ್ಯಾಂಕುಗಳು ಗ್ರಾಹಕ ಖಾಸಾಗಿತನವನ್ನು ಪಣಕ್ಕಿಟ್ಟು ಸಾವಿರಾರು ಉದ್ಯೋಗಗಳನ್ನು ಹೊರಗುತ್ತಿಗೆ ನೀಡುತ್ತಿದೆ, ಹಾಗೂ ಮತ್ತೊಂದೆಡೆ ಸರ್ಕಾರ ನೇಮಕಾತಿಯನ್ನು ಕಡಿಮೆ ಮಾಡಿತ್ತಿದೆ. ಅಲ್ಲದೆ ಬ್ಯಾಂಕಿಂಗ್ ಸಂಘಟನೆಳಿಂದ ಪದಾಧಿಕಾರಿಗಳನ್ನು ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಿ ಹುದ್ದೆಯಿಂದ ಕಿತ್ತುಹಾಕಲಾಗುತ್ತಿದೆ. ಈ ಹಿನ್ನಲೆಯಲ್ಲಿ (ನ. ೧೯) ಶನಿವಾರ ಸರ್ಕಾರಿ ಬ್ಯಾಂಕುಗಳ ಸಾವಿರಾರು ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದು, ಬ್ಯಾಂಕಿಂಗ್ ಚಟುವಟಿಕೆಗಳು ವ್ಯತಯವಾಗುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ಸಂಘದ ಮುಖ್ಯ ಕಾರ್ಯದರ್ಶಿಯಾದ ಸಿ. ಹೆಚ್.ವೆಂಕಟಾಚಲಮ್ ತಿಳಿಸಿದ್ದಾರೆ.