ನ್ಯೂಸ್ ನಾಟೌಟ್: 75ರ ವಯಸ್ಸಿನಲ್ಲಿ ಯಾರಿಗೆ ಸಿಗುತ್ತೇ ಈ ಮದುವೆ ಭಾಗ್ಯ ಹೇಳಿ. ಇದೀಗ ಸಕತ್ ಸುದ್ದಿಯಲ್ಲಿದೆ ಮಾಜಿ ಮೇಯರ್ ನ ಮದುವೆ ಸಂಭ್ರಮ.
ಹುಬ್ಬಳ್ಳಿ- ದಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಿ.ಕೆ ಚವ್ಹಾಣ್ 75ನೇ ಇಳಿವಯಸ್ಸಿನಲ್ಲೂ ಹೊಸ ಹುಮ್ಮಸ್ಸಿನಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಇದೀಗ ಸುದ್ದಿಯಲ್ಲಿರುವ ಮಾಜಿ ಮೇಯರ್ ನ 2ನೇ ಮದುವೆ ಸಂಭ್ರಮದಲ್ಲಿ ಇವರ ಮಕ್ಕಳು, ಸೊಸೆಯಂದಿರು ,ಮೊಮ್ಮಕ್ಕಳು ಹಾಗೂ ಇಡೀ ಕುಟುಂಬವೇ ಭಾಗಿಯಾಗಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯಷ್ಟೇ ಡಿ. ಕೆ ಚವ್ಹಾಣ್ ಮೊದಲ ಪತ್ನಿ ಶಾರದಾ ತೀರಿ ಹೋಗಿದ್ದರು. ಇದೀಗ ಪತ್ನಿಯ ಅಕ್ಕನ್ನು ಮದುವೆ ಯಾಗಿದ್ದಾರೆ. 75ರ ಪ್ರಾಯದಲ್ಲಿ ಮಾಜಿ ಮೇಯರ್ ಅವರ 2ನೇ ಮದುವೆ ಸುದ್ದಿ ಈಗ ಸಖತ್ ವೈರಲ್ ಆಗಿದೆ.