ನ್ಯೂಸ್ ನಾಟೌಟ್ : ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯೂಎಚ್ ಒ ) ನ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ (೬೩ ವ) ಮಂಗಳವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಭಾರತ ಪ್ರಖ್ಯಾತ ವಿಜ್ಞಾನಿ ಸೌಮ್ಯ ಸ್ವಾಮಿನಾಥನವರು ಸುಮಾರು ೫ ವರ್ಷಗಳ (೨೦೧೭-೨೦೨೨) ಕಾಲ ತಮ್ಮ ವೃತ್ತಿಪರ ಜೇವನ ನಡೆಸಿದ್ದಾರೆ. ಆದರೆ ಈಗ ನಿವೃತಿಯಾಗಲು ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ನಿರ್ಗಮಿಸುವುದಾಗಿ ಟ್ವಿಟ್ಟರ್ನಲ್ಲಿ ಘೋಷಿಸಿದ್ದಾರೆ. ಇವರು ಮಕ್ಕಳ ತಜ್ಞ ವೈದ್ಯಕೀಯ ಸಂಶೋಧಕರಾಗಿ ಕಾರ್ಯನರ್ವಹಿಸಿದ್ದಾರೆ. ಮಕ್ಕಳ ಮತ್ತು ವಯಸ್ಕರ ಕ್ಷಯ ರೋಗ(ಟಿಬಿ) ಸಾಂಕ್ರಾಮಿಕ ರೋಗಶಾಸ್ತ್ರ, ಎಚ್ಐವಿ ಸಂಬಂಧಿತ ಟಬಿಯಲ್ಲಿ ಪೋಷಣೆ ಮಾಡುವುದು ಆಸಕ್ತಿಯ ಕ್ಷೇತ್ರವಾಗಿದೆ. ಬಡ ನಿರುದ್ಯೋಗಿಗಳಿಗೆ ಉದ್ಯೋವಕಾಶವನ್ನು ನೀಡಿದ್ದಾರೆ. ಇವರು ಬರೀ ಸಂಶೋಧನೆ ಅಲ್ಲದೆ , ಕೆಲವು ಕೃತಿಗಳನ್ನು ಬರೆದು ಪ್ರಕಟಣೆಗಳನ್ನು ಮಾಡಿದ್ದಾರೆ. ಹಾಗು ನ್ಯಾಷನಲ್ ಪೀಡಿಯಾಟ್ರಿಕ್ ಪಲ್ಮನರಿ ಕಾಗದಕ್ಕೆ ಡಾ. ಕೀಯಾಲಾಹರಿ ಚಿನ್ನದ ಪದಕ, ಕ್ಷಣಿಕಾ ಓರೇಶನ್ ಪ್ರಶಸ್ತಿ, ತಮಿಳುನಾಡು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ, ನ್ಯಾಶನಲ್ ಆಫ್ ಸೈನ್ಸಸ್ ಭಾರತ& ಬೆಂಗಳೂರು ಫಲೋ ಮುಂತಾದ ಪ್ರಶಸ್ತಿ ಲಭಿಸಿದೆ.