ವರದಿ: ರಸಿಕಾ ಮುರುಳ್ಯ
ನ್ಯೂಸ್ ನೌಟೌಟ್: ಇಂದಿನ ಬ್ಯುಸಿ ಯುಗದಲ್ಲಿ ಮನುಷ್ಯನಿಗೆ ಒತ್ತಡವೇ ಹೆಚ್ಚು. ಪರಿಸ್ಥಿತಿ ಬದಲಾದ ಹಾಗೇ ಜನರಲ್ಲಿ ಒಂದೊಂದು ಸಮಸ್ಯೆಗಳು ವಕ್ಕರಿಸಿಕೊಂಡು ಹೈರಾಣಾಗಿಸುತ್ತವೆ. ಅಂತಹ ಸಮಸ್ಯೆಗಳಲ್ಲಿ ಕೂದಲು ಉದುರುವ ಸಮಸ್ಯೆಯೂ ಒಂದು..!
ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಹೆಚ್ಚಿನವರಿಗೆ ಇದೆ. ಯಾಕೆ ಈ ಸಮಸ್ಯೆ ತಲೆದೂರುತ್ತಿದೆ ಅನ್ನುವುದಕ್ಕೆ ಉತ್ತರ ಹುಡುಕುತ್ತಾ ಹೋರಾಟಗ ಹಲವಾರು ವಿಚಾರಗಳು ತಿಳಿದು ಬರುತ್ತದೆ. ಅಂತಹ ಸಮಸ್ಯೆಗಳನ್ನು ನಾವು ಇಲ್ಲಿ ನಿಮಗೆ ತಿಳಿಸಿದ್ದೇವೆ. ನಿಮ್ಮ ಕೂದಲಿನ ಪೋಷಣೆಯನ್ನು ನೀವು ಎಚ್ಚರಿಕೆಯಿಂದ ನಾವು ಹೇಳಿದ ರೀತಿ ನಿರ್ವಹಿಸಿದರೆ ಸ್ವಲ್ಪ ಮಟ್ಟಿಗೆ ಕೂದಲಿನ ಸಮಸ್ಯೆ ನಿವಾರಣೆಯಾಗಬಹುದು.
ಹೆಚ್ಚಾಗಿ ಹೆಣ್ಣು ಮಕ್ಕಳ ಬಾಯಲ್ಲಿ ಕೇಳಿ ಬರೋದು ಒಂದೇ ಕೂದಲು ಉದುರುತ್ತದೆ. ಜೊತೆಯಲ್ಲಿದ್ದ ಸ್ನೇಹಿತರ ಜೊತೆಗೂ ಹೇಳೋದು ಅದೇ ಮಾತು. ಯಾಕಪ್ಪ ಈ ಸಮಸ್ಯೇ ಅಂತ ಚಿಂತೆಯಾಗಿ ಬಿಟ್ಟಿದೆ. ಹೆಣ್ಣುಮಕ್ಕಳಿಗೆ ಸೌಂದರ್ಯದ ಜೊತೆಗೆ ಕೂದಲು ಬಹಳ ಮುಖ್ಯವಾಗಿದೆ. ಇಂತಹ ಸಮಸ್ಯೆ ಪ್ರತಿಯೊಂದು ಹೆಣ್ಣುಮಕ್ಕಳಲ್ಲೂ ಕಾಡುತ್ತಿದೆ. ಕೂದಲು ಉದುರುವಿಕೆಯ ಜೊತೆಗೆ ತಲೆಹೊಟ್ಟು ಸಮಸ್ಯೆ ಕೂಡ ಮಹಿಳೆಯರು ಮತ್ತು ಪುರುಷರ ನಿದ್ರೆಗೆಡಿಸಿದೆ.
ಅತಿಯಾಗಿ ಖಾರ ,ಉಪ್ಪು,ಉಳಿ ಆಹಾರ ಸೇವನೆ ಮಾಡಿದರೆ, ಅತಿಯಾಗಿ ಕಾಫಿ ಕುಡಿದರೆ, ಮದ್ಯಪಾನ ಸೇವಿಸುವುದರಿಂದ , ಎಣ್ಣೆಯ ಪದಾರ್ಥಗಳನ್ನು ಸೇವಿಸುವುದರಿಂದ , ಪಿತ್ತ ಹೆಚ್ಚಾದರೆ, ದೇಹದಲ್ಲಿ ಪ್ರೋಟಿನ್ ಅಂಶ ಕಡಿಮೆಯಾದರೆ ಈ ಸಮಸ್ಯೆಗಳು ಕಾಣಿಸುತ್ತದೆ.
- ಬೆಣ್ಣೆ ಹಣ್ಣಿನಲ್ಲಿ ಆರೋಗ್ಯಕರ ಕೊಬ್ಬಿನಾಂಶವಿದೆ. ಹಾಗೂ ಇದರಲ್ಲಿ ಮಿಟಮಿನ್ ಇ ಇರುವುದರಿಂದ 200 ಗ್ರಾಂ ಬೆಣ್ಣೆ ಹಣ್ಣು ಸೇವಿಸಿದರೆ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ.
- ಬೀನ್ಸ್ ನಲ್ಲಿ ಸತುವಿನಂಶವಿದೆ ಹಾಗಗಿ 100 ಗ್ರಾಂ ರಷ್ಟು ಬೇಯಿಸಿದ ಬೀನ್ಸ್ ತರಕಾರಿಯನ್ನು ಸೇವಿಸದರೆ ಉತ್ತಮ.
- ಮೊಟ್ಟೆಯಲ್ಲಿ ಪ್ರೋಟಿನ್ ಅಂಶವಿರುವುದರಿಂದ , ಪ್ರತಿದಿನ ಒಂದು ಮೊಟ್ಟೆ ಸೇವಿಸಿದರೆ, ಕೂದಲಿನ ಆರೋಗ್ಯಕ್ಕೆ ಉತ್ತಮ ಹಾಗೂ ಕೂದಲು ದಟ್ಟವಾಗಿ ಬೆಳೆಯತ್ತದೆ.
- ಸೂರ್ಯಕಾಂತಿ ಬೀಜ, ಅಗಸೆದ ಬೀಜ, ಶಿಯಾಬೀಜಗಳು ಇವುಗಳಲ್ಲಿ ವಿಟಮಿನ್ ಇ ಅಧಿಕವಿರುವ ಕಾರಣ ಪ್ರತಿದಿನ 1 ಸ್ಪೂನ್ ತಿನ್ನುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
- ನೀರು ಆರೋಗ್ಯಕ್ಕೆ ಬಹಳ ಮುಖ್ಯ. ಪ್ರತಿದಿನ 1ಲೀ ನೀರು ಕುಡಿಯಬೇಕು. ಉತ್ತಮ ಆರೋಗ್ಯದ ಜೊತೆಗೆ ಕೂದಲು ಉತ್ತಮವಾಗುತ್ತದೆ.