ನ್ಯೂಸ್ ನಾಟೌಟ್: ದಿನನಿತ್ಯ ಬಳಕೆಯ ದಿನಸಿ ವಸ್ತುಗಳ ಬೆಲೆ ಗಗನದೆತ್ತರಕ್ಕೆ ಏರಿದೆ. ಈ ಬೆನ್ನಲ್ಲೇ ಹಾಲು, ಮೊಸರಿನ ಬೆಲೆಯೂ ಏರಿಕೆಯಾಗಿದ್ದು ಗ್ರಾಹಕರಿಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ನಂದಿನಿ ಹಾಲಿನ ದರ ಏರಿಕೆಗೆ ಆದೇಶ ಹೊರಡಿಸಿದೆ. ನ.14 ರ ಮಧ್ಯ ರಾತ್ರಿಯಿಂದ ಹಾಲಿನ ನಿರ್ದಿಷ್ಟ ದರ ಜಾರಿಗೆ ಬರಲಿದೆ. ಒಂದು ಲೀ. ನಂದಿನಿ ಹಾಲು ಹಾಗೂ ಮೊಸರಿಗೆ ಕೆಎಮ್ ಎಫ್ 3 ರು. ಏರಿಕೆ ಮಾಡಿದ್ದಾರೆ. ನಂದಿನಿ ಹಾಲಿಗೆ ಹೆಚ್ಚಳ ಮಾಡಿದ ದರವನ್ನು ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಕೆಎಂಎಫ್ನ ಮಂಡಳಿಯು ತಿಳಿಸಿದೆ. ಸದ್ಯ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಈ ನಡುವೆ ಹಾಲಿನ ಬೆಲೆ ಏರಿಕೆ ಆಗಿರುವುದು ಜನರಿಗೆ ತೀವ್ರ ತಲೆನೋವು ತಂದಿದೆ.