ನ್ಯೂಸ್ ನಾಟೌಟ್: ಮೆಟಾ ಮಾಲೀಕತ್ವದ ವಾಟ್ಸ್ಆ್ಯಪ್ ತನ್ನ ಗ್ರಾಹಕರಿಗೆ ‘ಕಮ್ಯುನಿಟಿ’ ಹೊಸ ವಿಶೇಷತೆಯನ್ನು ಜಾಗತಿಕವಾಗಿ ಪರಿಚಯಿಸುತ್ತಿದೆ. ಪ್ರತಿಸ್ಪರ್ಧಿ ಟೆಲಿಗ್ರಾಂ ಆ್ಯಪ್ನಲ್ಲಿ ಈಗಾಗಲೇ ಲಭ್ಯವಿದ್ದ ಈ ಫೀಚರ್ ಅನ್ನು ವ್ಯಾಟ್ಸ್ಆ್ಯಪ್ನಲ್ಲಿಯೂ ಪರಿಚಯಿಸಲಾಗಿದೆ.
ಹೆಚ್ಚು ಜನರಿರುವ ದೊಡ್ಡ ಗುಂಪುಗಳನ್ನು (ವಾಟ್ಸ್ಆ್ಯಪ್ ಗ್ರೂಪ್)ಗಳನ್ನು ರಚಿಸಲು ಇದು ಅನುವು ಮಾಡಿಕೊಡುತ್ತಿದೆ. ಹೆಚ್ಚು ಜನರಿಗೆ ವಿಡಿಯೊ ಕರೆ ಮಾಡುವ, ಇನ್–ಚಾಟ್ ಪೋಲ್ (ಅಭಿಪ್ರಾಯ ಸಂಗ್ರಹ) ದಂಥ ವಿಶೇಷತೆಗಳನ್ನೂ ವಾಟ್ಸ್ಆ್ಯಪ್ ಗ್ರಾಹಕರಿಗೆ ಕಲ್ಪಿಸಿದೆ. ಮೆಟಾ ಮಾಲೀಕತ್ವದ ವಾಟ್ಸ್ಆ್ಯಪ್ ತನ್ನ ಗ್ರಾಹಕರಿಗೆ ‘ಕಮ್ಯುನಿಟಿ’ ಹೊಸ ವಿಶೇಷತೆಯನ್ನು ಜಾಗತಿಕವಾಗಿ ಪರಿಚಯಿಸುತ್ತಿದೆ. ಪ್ರತಿಸ್ಪರ್ಧಿ ಟೆಲಿಗ್ರಾಂ ಆ್ಯಪ್ನಲ್ಲಿ ಈಗಾಗಲೇ ಲಭ್ಯವಿದ್ದ ಈ ಫೀಚರ್ ಅನ್ನು ವ್ಯಾಟ್ಸ್ಆ್ಯಪ್ನಲ್ಲಿಯೂ ಪರಿಚಯಿಸಲಾಗಿದೆ.
ಹೆಚ್ಚು ಜನರಿರುವ ದೊಡ್ಡ ಗುಂಪುಗಳನ್ನು (ವಾಟ್ಸ್ಆ್ಯಪ್ ಗ್ರೂಪ್)ಗಳನ್ನು ರಚಿಸಲು ಇದು ಅನುವು ಮಾಡಿಕೊಡುತ್ತಿದೆ. ಹೆಚ್ಚು ಜನರಿಗೆ ವಿಡಿಯೊ ಕರೆ ಮಾಡುವ, ಇನ್–ಚಾಟ್ ಪೋಲ್ (ಅಭಿಪ್ರಾಯ ಸಂಗ್ರಹ) ದಂಥ ವಿಶೇಷತೆಗಳನ್ನೂ ವಾಟ್ಸ್ಆ್ಯಪ್ ಗ್ರಾಹಕರಿಗೆ ಕಲ್ಪಿಸಿದೆ. ವಿವಿಧ ಚಾಟ್ ಗುಂಪುಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ‘ವಾಟ್ಸ್ಆ್ಯಪ್ ಕಮ್ಯುನಿಟಿ’ಯ ವಿಶೇಷತೆ. ಇದರ ಮೂಲಕ ಸಾವಿರಾರು ಮಂದಿಗೆ ಒಂದೇ ಬಾರಿಗೆ ಸಂದೇಶ ರವಾನಿಸಬಹುದು. ಈ ವೈಶಿಷ್ಟ್ಯವು ಕೆಲಸದ ಸ್ಥಳಗಳು, ಸುದ್ದಿ ಪೋರ್ಟಲ್ ಅಥವಾ ಶಾಲೆಗಳಲ್ಲಿ ಸಮರ್ಥವಾಗಿ ಬಳಕೆ ಬರಲಿದೆ. ಸಮಾನ ಆಸಕ್ತಿ ಹೊಂದಿರುವ ಜನರಿಗೆ ಚಾಟ್ ಮಾಡಲು ಮತ್ತು ಸಂವಹನ ನಡೆಸಲು ಇದು ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ. ಕಮ್ಯುನಿಟಿ ಫೀಚರ್ನ ಮೂಲಕ 50 ವಾಟ್ಸ್ಆ್ಯಪ್ ಗುಂಪುಗಳನ್ನು ಒಟ್ಟಿಗೆ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಇಷ್ಟು ದಿನ ಕೇವಲ ಗ್ರೂಪ್ ಕ್ರಿಯೇಟ್ ಮಾಡಿ ಅದರಲ್ಲಿ ಗ್ರಾಹಕರಿಗೆ ಬೇಕಾದವರ ನಂಬರ್ ಅನ್ನು ಸೇರಿಸುವ ಅವಕಾಶವಿತ್ತು. ಆದರೆ, ಇನ್ನು ಬೇರೆ ಬೇರೆ ಗ್ರೂಪ್ಗಳನ್ನು ಈ ಕಮ್ಯುನಿಟಿಯಲ್ಲಿ ಸೇರಿಸಬಹುದಾಗಿದೆ.
ಆಂಡ್ರಾಯ್ಡ್ ಫೋನ್ಗಳಲ್ಲಿ ಕಮ್ಯುನಿಟಿ ಫೀಚರ್ ಅನ್ನು ಬಳಸಲು ಗ್ರಾಹಕರು ತಮ್ಮ ಚಾಟ್ಸ್ನ ಮೇಲ್ಭಾಗದಲ್ಲಿ ಕಾಣುವ ನ್ಯೂ ಕಮ್ಯುನಿಟಿಸ್ ಟ್ಯಾಬ್ ಮೇಲೆ ಟ್ಯಾಪ್ ಮಾಡಬೇಕು. ಅದೇ ರೀತಿ, ಐಒಎಸ್ನಲ್ಲಿ ಚಾಟ್ನ ಬಾಟಮ್ನಲ್ಲಿರುವ ಆಪ್ಷನ್ ಮೇಲೆ ಟ್ಯಾಪ್ ಮಾಡಬೇಕು. ಒಮ್ಮೆ ನೀವು, ವಾಟ್ಸ್ಆ್ಯಪ್ನಲ್ಲಿ ಕಮ್ಯುನಿಟಿ ಸೇರಿಕೊಂಡ ಬಳಿಕ, ಲಭ್ಯವಿರುವ ಗ್ರೂಪ್ಗಳಿಂದ ನಿಮಗೆ ಬೇಕಿರುವ ಮಾಹಿತಿಯನ್ನು ಪಡೆದುಕೊಳ್ಳಬಹುದು. ಜತೆಗೆ, ಅಡ್ಮಿನ್ಗಳು ಕಮ್ಯುನಿಟಿಯಲ್ಲಿರುವ ಪ್ರತಿಯೊಬ್ಬರಿಗೆ ಪ್ರಮುಖ ಅಪ್ಡೇಟ್ಸ್ ಕಳುಹಿಸಬಹುದು.