ವರದಿ:ರಸಿಕಾ ಮುರುಳ್ಯ
ನ್ಯೂಸ್ ನಾಟೌಟ್: ತನ್ನ ಸ್ವಂತ ಕಾಲ ಮೇಲೆ ನಿಂತುಕೊಳ್ಳಬೇಕು ಎಂದು ಕನಸು ಕಟ್ಟಿಕೊಂಡಿದ್ದ ಹುಡುಗಿಯೊಬ್ಬಳು ಇದ್ದಕ್ಕಿದ್ದ ಹಾಗೆ ದಿಢೀರ್ ನಾಪತ್ತೆಯಾಗಿರುವ ಘಟನೆ ವಿಟ್ಲದಿಂದ ವರದಿಯಾಗಿದೆ. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದರ್ಶನಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಯುವತಿ ಮಂಗಳೂರಿಗೆ ಹೋಗಿದ್ದಳು. ಆದರೆ ಆಕೆ ನಂತರ ಮನೆಗೆ ಬಂದಿಲ್ಲ ಎಂದು ಹೆತ್ತವರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಕಂಬಳಬೆಟ್ಟು ನಿವಾಸಿ ಸುಶ್ಮಿತ (21) ನಾಪತ್ತೆಯಾದ ಯುವತಿ. ಮುಂಜಾನೆ ಮನೆಯಿಂದ ಹೋದ ಈಕೆ ತಿರುಗಿ ಮನೆಗೆ ಬಾರದ ಕಾರಣ ಮನೆಯವರಿಗೆ ಆತಂಕ ಶುರುವಾಗಿದೆ. ವಿಟ್ಲದ ಪೋಲಿಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.