ನ್ಯೂಸ್ ನಾಟೌಟ್ : ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ವೈದ್ಯರೆಂದರೆ ದೇವರಿಗೆ ಸಮಾನ ಎಂದೇ ಜನರು ಭಾವಿಸಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಕೆಲವು ವೈದ್ಯರು ಹಣದ ದಾಹಕ್ಕೆ ಬಿದ್ದು ಮಾಡಬಾರದ್ದನ್ನು ಮಾಡಿ ಜನರ ನಂಬಿಕೆಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ.
ಇಂತಹ ಒಂದು ವಿಚಾರದಲ್ಲಿ ಇದೀಗ ಪುತ್ತೂರಿನ ವೈದ್ಯರ ಹೆಸರೊಂದು ಕೇಳಿ ಬಂದಿದೆ. ಅವರು ಒಂದೂವರೆ ತಿಂಗಳ ಮಗುವಿಗೆ ಅವಧಿ ಮೀರಿದ ಇಂಜೆಕ್ಷನ್ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಮಗುವಿನ ತಂದೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವೈದ್ಯರ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವಿಟ್ಲದ ಕನ್ಯಾನ ನಿವಾಸಿ ಜೀವನ್ ಪ್ರಕಾಶ್ ಡಿಸೋಜಾ ಎನ್ನುವವರು ಅಕ್ಟೋಬರ್ ೨೪ರಂದು ತನ್ನ ಮಗುವನ್ನು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಮಗುವಿಗೆ ನೀಡಿದ್ದ ಚುಚ್ಚು ಮದ್ದಿನ ಸ್ಟಿಕ್ಕರ್ನಲ್ಲಿ ಅವಧಿ ಮೀರಿದ ಚುಚ್ಚು ಮದ್ದು ನೀಡಿರುವುದು ತಿಳಿದು ಬಂದಿದೆ. ತಕ್ಷಣ ಅವರು ದೂರನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.