ನ್ಯೂಸ್ ನಾಟೌಟ್: ‘ಪೆಟ್ರೋಲ್ ಬಾಂಬ್’ ಸ್ಫೋ ಟಿಸುವ ಆಡಿಯೋ ವೈರಲ್ ಪ್ರಕರಣದ ಆರೋ ಪಿಯಾಗಿರುವ ಮಡಿಕೇರಿ ನಗರಸಭೆಯ ಸದಸ್ಯನ ಸದಸ್ಯತ್ವವನ್ನು ರದ್ದುಗೊಳಿಸಬೇಕು ಮತ್ತು ಒಟ್ಟು ಪ್ರಕರಣವನ್ನು ಎನ್ಐಎ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.
ನಗರಸಭೆ ಎದುರು ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೆಟ್ರೋಲ್ ಬಾಂಬ್ ಪ್ರಕರಣದ ಹಿಂದಿನ ಶಕ್ತಿಗಳನ್ನು ಗುರುತಿಸಿ ಸೂಕ್ತಕ್ರಮ ಕೈಗೊ ಳ್ಳಬೇಕೆಂದು ಒತ್ತಾಯಿಸಿದರು. ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಸಂಯೋ ಜಕ ಕುಕ್ಕೇರ ಅಜಿತ್ ಮಾತನಾಡಿ ಪಟ್ರೋಲ್ ಬಾಂಬ್ ಸಿಡಿಸಿ ಅಶಾಂತಿಯನ್ನು ಹುಟ್ಟು ಹಾಕುವ ಪ್ರಯತ್ನ ನಡೆಸುವುದು ಮೊಬೈಲ್ ಆಡಿಯೋದಿಂದ ಬಹಿರಂಗವಾಗಿದೆ. ಆರೋ ಪಿಗಳನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ಆರೋ ಪಿ ಸ್ಥಾನದಲ್ಲಿರುವ ಮುಸ್ತಫರನ್ನು ನಗರಸಭಾ ಸದಸ್ಯ ಸ್ಥಾನದಿಂದ ವಜಾಗೊ ಳಿಸಬೇಕು. ಪ್ರಕರಣವನ್ನು ಎನ್ಐಎ ತನಿಖೆಗೆ ಒಳಪಡಿಸುವ ಮೂಲಕ ಅಗತ್ಯ ಕ್ರಮ ಕೈಗೊ ಳ್ಳಬೇಕು, ಆರೋ ಪಿಗಳನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ನಗರಸಭಾ ಸದಸ್ಯರಾದ ಎಸ್.ಸಿ.ಸತೀಶ್, ಅರುಣ್ ಶೆಟ್ಟಿ, ಮಹೇಶ್ ಜೈನಿ, ಕವನ್ ಕಾವೇರಪ್ಪ, ಶ್ವೇತ, ಸಬಿತಾ ಮತ್ತಿತರರು ಉಪಸ್ಥಿತರಿದ್ದರು.