ನ್ಯೂಸ್ ನಾಟೌಟ್: ಕಳೆದ 9 ತಿಂಗಳಲ್ಲಿ 9 ಜನರನ್ನು ಕೊಂದಿದ್ದ ಹುಲಿಯನ್ನು ಬಿಹಾರದ ಬಘಾದಲ್ಲಿ ಶೂಟರ್ಗಳು ಕೊಂದಿದ್ದಾರೆ. 26 ದಿನಗಳಿಂದ ಹುಲಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಶನಿವಾರ ಗೋವರ್ಧನ ಪೊಲೀಸ್ ಠಾಣಾ ವ್ಯಾಪ್ತಿಯ ಬಲುವಾ ಗ್ರಾಮದ ಗದ್ದೆಯಲ್ಲಿ ಹುಲಿಯನ್ನು ಸುತ್ತುವರಿದಿದ್ದರು. ಇದಾದ ನಂತರ ಶೂಟರ್ಗಳು ಹುಲಿಗೆ 4 ಗುಂಡುಗಳನ್ನು ಹೊಡೆದಿದ್ದಾರೆ.
ಹುಲಿಯ ಘರ್ಜನೆ ಕೇಳಿದ ಬಳಿಕ, ಹುಲಿಗೆ ಗುಂಡು ತಗುಲುದ್ದು ಸ್ಪಷ್ಟವಾಗಿತ್ತು. ಇದಾದ ಬಳಿಕ ತಂಡ 3 ಕಡೆಯಿಂದ ಗದ್ದೆಗೆ ನುಗ್ಗಿ ಹುಲಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ (ವಿಟಿಆರ್) ಈ ಹುಲಿ ಶುಕ್ರವಾರವೂ ತಾಯಿ ಮತ್ತು ಒಂದು ಮಗುವನ್ನು ಕೊಂದಿತ್ತು. ಕಳೆದ 3 ದಿನಗಳಲ್ಲಿ ಈ ಹುಲಿ ದಾಳಿಗೆ 4 ಮಂದಿ ಸಾವು ಕಂಡಿದ್ದರು.ಹುಲಿಯ ಹೆಜ್ಜೆ ಗುರುತು ಪತ್ತೆಯಾದ ಬಳಿಕ ಅದು ಕಬ್ಬಿನ ಗದ್ದೆಯಲ್ಲಿ ಅಡಗಿರುವುದು ತಜ್ಞರ ತಂಡಕ್ಕೆ ಮನವರಿಕೆಯಾಗಿದೆ. ಇದಾದ ಬಳಿಕ ಮೈದಾನವನ್ನು ಎಲ್ಲಾ ಕಡೆಯಿಂದ ಬಲೆಯಿಂದ ಸುತ್ತುವರಿಯಲಾಗಿತ್ತು. ಇದಾದ ಬಳಿಕ ಬಂದೂಕು ಹಿಡಿದ ತಂಡ ಆನೆಯ ಮೇಲೆ ಸವಾರಿ ಮಾಡುತ್ತಾ ಕಬ್ಬಿನ ಗದ್ದೆಯೊಳಗೆ ತೆರಳಿತು. ಅಲ್ಲಿಗೆ ಬಂದ ತಕ್ಷಣ ತಂಡದ ಕಣ್ಣು ಹುಲಿಯತ್ತ ನೆಟ್ಟಿದ್ದು, ಗುಂಡಿನ ದಾಳಿ ನಡೆಸಲಾಗಿದೆ.