ನ್ಯೂಸ್ ನಾಟೌಟ್: ಭಾರತದಲ್ಲಿ ಶೇ.75ರಷ್ಟು ಸಾವು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಸಂಭವಿಸುತ್ತವೆ ಎಂದು ಲ್ಯಾನ್ಸೆಟ್ ಅಧ್ಯಯನವು ಹೇಳುತ್ತದೆ. 2030ರ ವೇಳೆಗೆ ಅಮೆರಿಕ, ಚೀನಾ ಅಥವಾ ರಷ್ಯಾದಲ್ಲಿ ಸಂಭವಿಸಿದ ಸಾವುಗಳಿಗಿಂತ ಭಾರತದಲ್ಲಿ ಹೃದಯ ಸಮಸ್ಯೆಗಳಿಂದ ಉಂಟಾಗುವ ಸಾವುಗಳು ಹೆಚ್ಚಾಗುತ್ತವೆ ಎಂಬ ಆಘಾತಕಾರಿ ಅಂಶವನ್ನು ಕೂಡ ಹೊರಹಾಕಿದೆ.
ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಭಾರತೀಯ ಹೃದಯರಕ್ತನಾಳದ ಎದೆಗೂಡಿನ ಶಸ್ತ್ರಚಿಕಿತ್ಸಕರ ಸಂಘದ (IACTS) ಕಾರ್ಯದರ್ಶಿ ಡಾ.ಸಿ.ಎಸ್.ಹಿರೇಮಠ್, ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಇದಕ್ಕೆ ಜನರ ಜಡ ಜೀವನಶೈಲಿಯೇ ಎಂದು ಹೇಳುತ್ತಾರೆ.
ಜಂಕ್ ಫುಡ್ ಸೇವನೆ, ಒತ್ತಡದಲ್ಲಿ ಅತಿಯಾಗಿ ತಿನ್ನುವುದು, ಅಧಿಕ ರಕ್ತದೊತ್ತಡ, ಧೂಮಪಾನ, ವ್ಯಾಯಾಮದ ಕೊರತೆ ಮತ್ತು ಸ್ಥೂಲಕಾಯತೆಯು ಭಾರತೀಯರಲ್ಲಿ ಹೆಚ್ಚಾಗುತ್ತಿದ್ದು, ಹೃದಯರಕ್ತನಾಳದ ಸಮಸ್ಯೆಗಳಿಗೆ ಇವು ಕಾರಣವಾಗುತ್ತದೆ ಎನ್ನುತ್ತಾರೆ.
ಹಾಗೆಂದು ವಿಶೇಷವಾಗಿ ಕಠಿಣವಾದ ಜಿಮ್ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದರ ವಿರುದ್ಧ ಮತ್ತು ಸರಿಯಾದ ವೈದ್ಯಕೀಯ ಮಾರ್ಗದರ್ಶನವಿಲ್ಲದೆ ಸ್ನಾಯುಗಳನ್ನು ಬೆಳೆಸುವುದು ಕೂಡ ಹೃದಯಕ್ಕೆ ಮಾರಕ ಎನ್ನುತ್ತಾರೆ, 40 ವರ್ಷ ಮೇಲ್ಪಟ್ಟವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡುತ್ತಾರೆ.