ನ್ಯೂಸ್ ನಾಟೌಟ್ : ಕಾಂಗ್ರೆಸ್ ನ 27 ನಾಯಕರನ್ನು ಪಕ್ಷದ ಮಾಧ್ಯಮದ ಮುಖ್ಯ ವಕ್ತಾರರಾಗಿ, 30 ಜನರನ್ನು ವಕ್ತಾರರಾಗಿ ಮತ್ತು 8 ಜನರನ್ನು ಉಪ ವಕ್ತಾರರನ್ನಾಗಿ ಕೆಪಿಸಿಸಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಸುಳ್ಯದ ಮಟ್ಟಿಗೆ ಹಿರಿಯ ಕಾಂಗ್ರೆಸ್ ನಾಯಕ ಭರತ್ ಮುಂಡೊಡಿ ದಕ್ಷಿಣ ಕನ್ನಡ ಜಿಲ್ಲೆಯಿಂದ ವಕ್ತಾರರಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಪಕ್ಷದ ಕೆಲಸವನ್ನು ಹಿಂದಿನಿಂದಲೂ ನಾವು ಮಾಡಿಕೊಂಡು ಬಂದಿರುವವರು. ಇದರಲ್ಲಿ ನಮಗೆ ತುಂಬಾ ಸಂತೋಷವಿದೆ ಎಂದು ನ್ಯೂಸ್ ನಾಟೌಟ್ ಗೆ ಭರತ್ ಮುಂಡೊಡಿ ಪ್ರತಿಕ್ರಿಯಿಸಿದರು. ಮುಂದುವರಿದು ಮಾತನಾಡಿದ ಅವರು, ಬಿಎಲ್ ಶಂಕರ್ ಅವರು ಅಧ್ಯಕ್ಷರಾಗಿದ್ದಾಗ ಹಿಂದಿನ ಸಮಿತಿಯ ಪ್ಯಾನಲ್ ನಲ್ಲಿ ನಾನಿದ್ದೆ. ಖರ್ಗೆಯವರು ಅಧ್ಯಕ್ಷರಾದ ನಂತರ ಪುನಾರಚನೆ ಮಾಡುವಾಗ ನನ್ನನ್ನು ಸಮಿತಿಗೆ ಸೇರಿಸಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಚಾರಧಾರೆಯನ್ನು ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ಸುಲಭವಾಗಿ ತಲುಪಿಸುವ ಕೆಲಸ ಮಾಡುತ್ತೇವೆ, ಕಾಂಗ್ರೆಸ್ ಜನಪರ ಕೆಲಸ ಮಾಡಿದ್ದರೂ ಕೂಡ ನಮ್ಮ ಅಭಿವೃದ್ಧಿ ಕೆಲಸಗಳು ಜನರಿಗೆ ತಲುಪುವಂತಹ ವ್ಯವಸ್ಥೆ ಆಗಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಜನರಿಗೆ ಸತ್ಯ ತಿಳಿಯಲಿದೆ ಎನ್ನುವ ವಿಶ್ವಾಸ ನನ್ನದು ಎಂದು ಮುಂಡೊಡಿ ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಬರುವ ವಿಚಾರಗಳನ್ನು ಜನರು ಹೆಚ್ಚು ನಂಬುತ್ತಾರೆ ಅನ್ನುವುದು ಇತ್ತೀಚೆಗೆ ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಸುಳ್ಳು ಸುದ್ದಿಗಳನ್ನು ಕಾಂಗ್ರೆಸ್ ಎಂದೂ ಹರಡುವುದಿಲ್ಲ. ಸುಳ್ಳಲ್ಲೇ ಬದುಕುವ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ ಎಂದು ಇದೇ ವೇಳೆ ಭರತ್ ಮುಂಡೊಡಿ ಕಮಲಪಾಳಯದ ವಿರುದ್ಧ ಹರಿಹಾಯ್ದರು.
ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ವಿ.ಎಸ್.ಉಗ್ರಪ್ಪ, ಜಿ.ಸಿ.ಚಂದ್ರಶೇಖರ್, ಎಲ್.ಹನುಮಂತಯ್ಯ, ಪ್ರೊ.ಬಿ.ಕೆ.ಚಂದ್ರಶೇಖರ್, ಪ್ರಕಾಶ್ ರಾಥೋ ಡ್, ಎಚ್.ಎಂ.ರೇವಣ್ಣ, ಬಿ.ಎನ್.ಚಂದ್ರಪ್ಪ, ಐವನ್ ‘ಡಿ’ಸೋ ಜ, ಮೋಟಮ್ಮ, ಡಿ.ಆರ್.ಪಾಟಿಲ್, ಆರ್.ವಿ.ವೆಂಕಟೇಶ್, ಎಂ.ನಾರಾಯಣಸ್ವಾಮಿ, ಜಲಜ ನಾಯಕ್ , ಪಿ.ಆರ್.ರಮೇಶ್, ಪ್ರೊ.ಕೆ.ಇ.ರಾಧಾಕೃಷ್ಣ, ಸಿ.ನಾರಾಯಣಸ್ವಾಮಿ, ನಂಜಯ್ಯನ ಮಠ, ಪ್ರೊ.ದ್ವಾರಕಾನಾಥ್, ಶಂಕರ್ ಗುಹ, ಧರ್ಮಸೇನಾ, ವೆಂಕಟೇಶ್, ನಿವೇದಿತ ಆಳ್ವಾ, ನಿಕೇತ್ ರಾಜ್, ಎಸ್.ಎ.ಹುಸೇನ್, ನಟರಾಜಗೌಡ
ಬೆಂಗಳೂರು: ಆಗಾ ಸುಲ್ತಾನ್, ಎಸ್.ಎ.ಅಹಮದ್, ಚಮನ್ ಫರ್ಜಾನ್, ಮಂಜುನಾಥ್ ಅದ್ದೆ, ನಿಜಾಮ್, ಸೂರ್ಯ ಮುಕುಂದರಾಜ್, ಶಾಲಿನಿ ಚಂದ್ರಶೇಖರ್, ಅಬ್ದುಲ್ ಮುನಿರ್ , ಬಸಪ್ಪ, ಕೊಪ್ಪಳ: ಶಂಕರ್ ರಾವ್, ಶೈಲಜಾ ಪಾಟಿಲ್, ಬಳ್ಳಾರಿ: ಸತ್ಯ ಪ್ರಕಾಶ, ಪತ್ರೇಶ್ ಹಿರೇಮಠ, ಗದಗ: ಡಾ.ಸಂಗಮೇಶ ಕೋಲಿಯವರ್, ಧಾರವಾಡ: ನೀರಲಕೆರೆ, ಜಿಲ್ಲಾಯೇತರ: ಅಮಲ ರಾಮಚಂದ್ರ, ಅಖೈ ಪದ್ಮಶಾಲಿ. ದಕ್ಷಿಣ ಕನ್ನಡ: ಭರತ್ ಮುಂಡೋಡಿ, ವಿನಯ್ ರಾಜ್, ವಿಠ್ಠಲ ಶೆಟ್ಟಿ,
ಕೆಪಿಸಿಸಿ ಮಾಧ್ಯಮ ಮತ್ತುಸಂವಹನ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ಅನಿಲ್ ತಡ್ಕಾಲ್, ಲಕ್ಷ್ಮಣ್, ಟಿ.ಅನಿಲ್ ಕುಮಾರ್ , ರಾಮಚಂದ್ರಪ್ಪ, ರಘು ದೊಡ್ಡೇರಿ, ವಿಜಯರ್ ಮತ್ತಿಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾಗಿ ರಾಜು, ಕಿರಣ್ ದೇಶ್ಮುಖ್, ವೈ.ಸಂಕೇತ್, ಅಮ್ರಿತ್ ಶೇಣಾಯ್, ಸತ್ಯಪ್ರಕಾಶ್, ಭವ್ಯ ನರಸಿಂಹಮೂರ್ತಿ, ಪ್ರಸಾದ್ ಜೈನ್, ಬಾಲಕೃಷ್ಣ ಯಾದವ್, ವೆಂಕಟೇಶ್, ಅಬ್ದುಲ್ ಮುನೀರ್, ರವಿ, ಲಕ್ಷ್ಮೇಪತಿ ಜಿ., ಚಂದ್ರಶೇಖರ್ ಗೌಡ, ಸಯೀದ್ ಅರ್ಶಾದ್ ಅವರನ್ನು ನೇಮಿಸಲಾಗಿದೆ.