ನ್ಯೂಸ್ ನಾಟೌಟ್ : ಉಬರಡ್ಕಮಿತ್ತೂರಿನ ಅಮೈಮಡಿಯಾರು ಶಾಲೆಯಲ್ಲಿ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ದ್ವಾರ ಮತ್ತು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1837 ರ ಅಮರ ಸೈನ್ಯದ ಚಾರಿತ್ರಿಕ ಉಬ್ಬುಶಿಲ್ಪಗಳ ಲೋಕಾರ್ಪಣೆ ಭಾನುವಾರ ನಡೆಯಿತು.
ಮದುವೆಗದ್ದೆ ಜ್ಞಾನಧಾಮ ಚಾರಿಟೇಬಲ್ ಟ್ರಸ್ಟ್ ಹಾಗೂ ಊರವರ ಮತ್ತು ದಾನಿಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ನೆರವೇರಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಚಿದಾನಂದ ಕೆ.ವಿ. ಮಹಾದ್ವಾರದ ಉದ್ಘಾಟನೆ ಮಾಡಿದರು. ಉಬ್ಬುಶಿಲ್ಪದ ಲೋಕಾರ್ಪಣೆಯನ್ನು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ ನೆರವೇರಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್.ಗಂಗಾಧರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಬರಡ್ಕ ಗ್ರಾ.ಪಂ. ಅಧ್ಯಕ್ಷೆ ಚಿತ್ರಕುಮಾರಿ ಪಾಲಡ್ಕ, ಲಯನ್ಸ್ ಕ್ಲಬ್ ನ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ, ಪುತ್ತೂರು ಜೇನು ವ್ಯ.ಸ.ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು, ಇತಿಹಾಸ ಸಂಶೋಧಕರಾದ ವಿದ್ಯಾಧರ ಕುಡೆಕಲ್ಲು, ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಸಾಹಿತಿ ಎ.ಕೆ ಹಿಮಕರ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶೀತಲ್ , ಅಕ್ಷಯ್ ಕುರುಂಜಿ ಮುಖ್ಯ ಅತಿಥಿಗಳಾಗಿದ್ದರು. ಮಿತ್ತೂರು ಜೋಡು ದೈವಗಳ ಸೇವೆಯನ್ನು ಸುದೀರ್ಘ ವರ್ಷಗಳಿಂದ ನಿರ್ವಹಿಸುತ್ತಿರುವ ರವಿರಾಮ ರೈಯವರನ್ನು ಹಾಗೂ 1837ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅಮರ ಸುಳ್ಯ ಸೈನ್ಯದಲ್ಲಿ ಭಾಗವಹಿಸಿ ಹುತಾತ್ಮರಾದವರ ನೆನಪಿಗೆ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ನೆಲೆಸಿರುವ ಕುಟುಂಬದವರ ಹಿರಿಯ ಸದಸ್ಯರಾದ ಕೃಷ್ಣಪ್ಪ ಕೆದಂಬಾಡಿ, ಪುರುಷೋತ್ತಮ ಮಾಣಿಬೆಟ್ಟು, ಶ್ರೀಧರ ಮಾಸ್ತರ್ ಮಡಿಯಾರು, ಮಾಧವ ಗೌಡ ಕೋಲ್ಚಾರು, ರಾಮಕ್ಕ ಹೊನ್ನಪ್ಪ ಅಮೈಮನೆ, ಶ್ರೀಮತಿ ರಾಮಕ್ಕ ಪುಟ್ಟಯ್ಯ ಕುಂಚಡ್ಕ, ಮಾಧವ ಸುಳ್ಯಕೋಡಿ, ಸೀತರಾಮ ಗೌಡ ಪಟ್ರಕೋಡಿ, ರುಕ್ಮಿಣಿ ದುಗ್ಗಪ್ಪ ಉರುಂಡೆ, ದುಗ್ಗಮ್ಮ ಸೋಮಯ್ಯ ಗೌಡ ಕುಡೆಕಲ್ಲು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ಮಾರಕ ದ್ವಾರ ನಿರ್ಮಾಣ ಸಮಿತಿ ಸದಸ್ಯ ಪಿ.ಎಸ್. ಗಂಗಾಧರ ಸ್ವಾಗತಿಸಿದರು. ಜ್ಞಾನಧಾಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಪ್ರಸ್ತಾವನೆಗೈದರು. ಕಾರ್ಯದರ್ಶಿ ನಿತ್ಯಾನಂದ ನಡುಮುಟ್ಲು , ಕೋಶಾಧಿಕಾರಿ ಶ್ರೀಮತಿ ಕಮಲಾಕ್ಷಿ ರಾಘವ ಗೌಡ ಮದುವೆಗದ್ದೆ, ನಿರ್ದೇಶಕ ಸುಬ್ರಹ್ಮಣ್ಯ ಎಂ.ಎಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.