ಕ್ರೈಂ

ಹಿಂದಿನಿಂದ ಬಂದು ಗುದ್ದಿ  ಯುವಕನ ಬಲಿ ಪಡೆದ ಯಮಸ್ವರೂಪಿ ಮೀನು ಲಾರಿ

ನ್ಯೂಸ್ ನಾಟೌಟ್ : ಕೆಲವು ಸಲ ಅಮಾಯಕರು ತಾವು ಮಾಡದ ತಪ್ಪಿಗೆ ರಸ್ತೆಯಲ್ಲಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಅಂತಹುದೇ ಒಂದು ಘಟನೆ ಇದೀಗ (ಸಂಜೆ ೫ ಗಂಟೆಗೆ) ಮಂಗಳೂರಿನ ತೊಕ್ಕೋಟು ಬಳಿ ನಡೆದಿದೆ.

ಬೈಕ್‌ವೊಂದಕ್ಕೆ ಮೀನು ಸಾಗಾಟದ ಲಾರಿ ರಭಸದಿಂದ ಬಂದು ಗುದ್ದಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತಪಟ್ಟವರನ್ನು ಕಾಸರಗೋಡಿ ಮಾನ್ಯದ ನಿವಾಸಿ ನಿತಿನ್ (27) ಎಂದು ಗುರುತಿಸಲಾಗಿದೆ.

ಇವರು ಸೆಲ್ಕೋ ಸೊಲಾರ್ ಸಂಸ್ಥೆಯ ಕಾಸರಗೋಡಿನ ಸೇಲ್ಸ್‌ ಎಕ್ಸಿಕ್ಯೂಟಿವ್ ಆಗಿದ್ದಾರೆ. ಕಾಸರಗೋಡಿನಲ್ಲಿ ಸೋಲಾರ್ ಕಂಪೆನಿಯಲ್ಲಿ ಕೆಲಸಕ್ಕಿದ್ದ ನಿತಿನ್ ತನ್ನ ಸ್ನೇಹಿತನ ಬೈಕ್ ನಲ್ಲಿ ಮಂಗಳೂರಿಗೆ ಆಗಮಿಸಿದ್ದು, ವಾಪಾಸ್ ಕಾಸರಗೋಡು ಕಡೆ ಹೋಗುವ ಸಂದರ್ಭದಲ್ಲಿ ಘಟನೆ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳದಲ್ಲಿದ್ದಾರೆ. ಮೃತ ನಿತಿನ್ ತಂದೆ , ತಾಯಿ ಇಬ್ಬರು ಸಹೋದರರನ್ನು ಅಗಲಿದ್ದಾರೆ.

Related posts

ವಿದ್ಯಾರ್ಥಿಗಳನ್ನು ಹೆದರಿಸಿ ಕಾರು ತೊಳೆಸಿದ ಶಿಕ್ಷಕಿ..! ಇಲ್ಲಿದೆ ವೈರಲ್ ವಿಡಿಯೋ

ಬೆಂಕಿ ಬಿತ್ತೆಂದು ಸಹಾಯಕ್ಕೆ ಓಡಿದ್ದವನ ಕೈ ಚಳಕ

ಶಿಕ್ಷಕನ ಮೊಬೈಲ್ ​​ನಲ್ಲಿ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳ ಫೋಟೋ..! ಸರ್ಕಾರಿ ಶಾಲಾ ಶಿಕ್ಷಕ ಮೊಹಮ್ಮದ್​ ಸಾದಿಕ್ ಬಂಧನ