ನ್ಯೂಸ್ ನಾಟೌಟ್ : ಕೆಲವೊಂದಷ್ಟು ಜನರು ಬರ್ತ್ಡೇ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಸೆಲಬ್ರೆಷನ್ ಮಾಡೋಕು ಅಂತಾ ಅಂದುಕೊಳ್ತಾರೆ. ಆದರೆ , ಇಲ್ಲೊಬ್ಬ ಪುಟ್ಟ ಬಾಲಕ ತನ್ನ ಹುಟ್ಟಹಬ್ಬವನ್ನ ವಿಭಿನ್ನವಾಗಿ ಆಚರಣೆ ಮಾಡಿ ಇತರರಿಗೂ ಸ್ಫೂರ್ತಿಯಾಗಿದ್ದಾನೆ.
ಜಿಲ್ಲೆಯ ಬಿಂಗರಕಟ್ಟಿ ಮೃಗಾಲಯದ ಭೀಮಾ ಎಂಬ ಚಿರತೆಯನ್ನು ಶೌರ್ಯ ಮರೆಣ್ಣವರ್ ಎಂಬ ಐದು ವರ್ಷದ ಬಾಲಕ ದತ್ತು ಪಡೆದಿದ್ದಾನೆ. ತನ್ನ ಬರ್ತ್ ಡೇಗೆ 50 ಸಾವಿರ ರೂಪಾಯಿ ಪಾವತಿಸಿ ವರ್ಷದ ಮಟ್ಟಿಗೆ ಚಿರತೆಯನ್ನ ದತ್ತು ಪಡೆಯಲಾಗಿದೆ. ಬಾಲಕನ ತಂದೆ ಅರಣ್ಯ ಇಲಾಖೆ ಅಧಿಕಾರಿ ಆಗಿದ್ದರಿಂದ ಶೌರ್ಯನಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ಮಹೇಶ ಅವರು ಈ ಹಿಂದೆ ಬ್ಯಾಡಗಿ ರೇಂಜ್ ನಲ್ಲಿದ್ದಾಗ ಚಿರತೆ ಗಣತಿ, ಕ್ಯಾಮರಾ ಅಳವಡಿಸುವ ಕೆಲಸಕ್ಕೆ ಶೌರ್ಯನೂ ಜೊತೆಗೆ ಹೋಗ್ತಿದ್ದ… ಅಲ್ಲೇ, ಚಿರತೆ ರಕ್ಷಣೆ ಮಾಡುವಾಗ ಸ್ಥಳಕ್ಕೆ ಭೇಟಿ ಕೊಟ್ಟು ಚಿರತೆ ಬಗ್ಗೆ ಮಾಹಿತಿ ಪಡೆಯುತ್ತಿದ್ದ. ಹೀಗಾಗಿ ಮಗನ ಆನೆಯಂತೆ ಬಿಂಕದಕಟ್ಟಿ ಮೃಗಾಲಯದಲ್ಲಿ ಪ್ರಾಣಿ ದತ್ತು ಪಡೆಯಲಾಗಿದೆ ಎಂದು ಶೌರ್ಯ ಅವರ ತಂದೆ ಮಹೇಶ್ ಹೇಳಿದ್ದಾರೆ. ಮೃಗಾಲಯದಲ್ಲಿ ಚೆಕ್, ಆರ್ ಟಿಜಿಎಸ್ ಮೂಲಕ ಹಣ ಪಾವತಿಸಿ ಹಾಗೂ ಆನ್ ಲೈನ್ ಮೂಲಕ ದತ್ತು ಸ್ವೀಕಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.