ನ್ಯೂಸ್ ನಾಟೌಟ್: ಇನ್ನೂ ಬದುಕಿ ಬಾಳಬೇಕಿದ್ದ ಯುವಕನೊಬ್ಬ ತೀವ್ರ ಅಸೌಖ್ಯದಿಂದ ನಿಧನವಾಗಿರುವ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.
ಮೂಲತಃ ಮಾಡವು ಅಂಗಡಿಹಿತ್ಲುನಿವಾಸಿ ಪ್ರಸ್ತುತ ಬೆಳ್ಳಾರೆಯಲ್ಲಿ ವಾಸವಿರುವ ಟೈಲರ್ ಗಂಗಾಧರ ಗೌಡ ಎಂಬವರ ಪುತ್ರ ಕಾರ್ತಿಕ್ (24) ಮೃತ ಯುವಕ. ಕಾರ್ತಿಕ್ ಡಿಪ್ಲೋಮಾ ವಿದ್ಯಾಭ್ಯಾಸ ಮಾಡಿ ಉದ್ಯೋಗದಲ್ಲಿದ್ದರು. ಆದರೇ ಕೆಲ ಸಮಯಗಳಿಂದ ಅಸೌಖ್ಯದಿಂದಿದ್ದ ಅವರು ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.